ಲಂಚ ಪಡೆದ ಆರೋಪ ಮತ್ತು ಕರ್ತವ್ಯ ಲೋಪ ಆರೋಪ
ಗದಗ ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ಎಂ. ಎಂ ನದಾಫ್ ಸಸ್ಪೆಂಡ್
ಗದಗ : ಗದಗ ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ಅವರನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಮಾಡಿ ಗದಗ ಎಸ್ಪಿ ಬಿ.ಎಸ್ ನೇಮಗೌಡ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಗದಗ ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ಎಂ. ಎಂ ನದಾಫ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ.
ಸಿಪಿಐ ನದಾಫ್ ಅವರ ವಿರುದ್ಧ ಲಂಚ ಪಡೆದು ನೊಂದ ಕುಟುಂಬಸ್ಥರ ಮೇಲೆ ದೌರ್ಜನ್ಯ ಮಾಡಿದ ಆರೋಪವಿದೆ.
ಹಲ್ಲೆ ಮಾಡಿದವರ ಪರವಾಗಿ ಸಿಪಿಐ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಎಸ್ಪಿ ಕಚೇರಿ ಬಳಿ ಅಡವಿಸೋಮಾಪುರ ಕುಟುಂಬಸ್ಥರು ಘೇರಾವ್ ಹಾಕಿದ್ದರು.
ಜಿಮ್ಸ್ ಬಳಿಯ ಮೆಡಿಕಲ್ ಶಾಪ್ ಮೇಲಿನ ದಾಳಿ, ಅಡವಿಸೋಮಾಪೂರ ಸಣ್ಣ ತಾಂಡಾದಲ್ಲಿ ಮನೆಗಳಿಗೆ ನುಗ್ಗಿ ಹಲ್ಲೆ ಪ್ರಕರಣಗಳು ನಿಭಾಯಿಸುವಲ್ಲಿ ಕರ್ತವ್ಯ ಲೋಪವೆಸಗಿದ್ದಾರೆ.
ಅಲ್ಲದೇ ಲಂಚ ಪಡೆದ ಆರೋಪ ಸೇರಿ ಹಲವಾರು ಪ್ರಕರಣಗಳಲ್ಲಿ ನಿರ್ಲಕ್ಷ್ಯ ಹಿನ್ನಲೆಯಲ್ಲಿ ಅಮಾನತು (suspended) ಮಾಡಿ ಆದೇಶಿಸಲಾಗಿದೆ.
ಈ ಕುರಿತು ಇಲಾಖೆ ತನಿಖೆಗೂ ಮೇಲಾಧಿಕಾರಿಗಳಿಗೆ ವರದಿ ಕಳಿಸಲಾಗಿದೆ.