ಚಾರಣಿಗರ ಸ್ವರ್ಗ ಭೀಮೇಶ್ವರ ಜಲಪಾತ
ಸಚಿತ್ರ ಲೇಖನ- ಉಮೇಶ ಮುಂಡಳ್ಳಿ, ಸಾಹಿತಿ , ಕವಿಗಳು
ದೇವಾಲಯಗಳು ಕೇವಲ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕೇಂದ್ರಗಳು ಅಷ್ಟೇ ಅಲ್ಲದೆ ಐತಿಹಾಸಿಕ ಪ್ರಾಕೃತಿಕ ಹಾಗೂ ಪರಂಪರೆಯನ್ನು ಸಾರುವ ಪ್ರಮುಖ ಶೃದ್ಧಾ ಕೇಂದ್ರವೂ ಹೌದು. ಇಂತಹ ಒಂದು ಐತಿಹಾಸಿಕ ಪ್ರಾಕೃತಿಕ ಹಾಗೂ ಪರಂಪರೆಯ ಹಿರಿಮೆ ಸಾರುವಂತ ಪ್ರಮುಖ ದೇವಾಲಯಗಳಲ್ಲಿ ಒಂದು ಭೀಮೇಶ್ವರ ದೇವಾಲಯ. ಭೀಮೇಶ್ವರ ಪಾಂಡವರ ಅಜ್ಞಾತ ವಾಸದ ಕಾಲದಲ್ಲಿ ಭೀಮನಿಂದ ಪ್ರತಿಷ್ಠಾಪಿಸಲ್ಪಟ್ಟ ದೇವಾಲಯವಾಗಿದೆ ಎನ್ನಲಾಗುತ್ತದೆ .ದೇವಾಲಯವಷ್ಟೇ ಅಲ್ಲದೆ ಸದಾ ದುಮ್ಮಿಕ್ಕುವ ಭವ್ಯ ಜಲಪಾತ ಹಸಿರು ಬೆಟ್ಟ ಗುಡ್ಡ ಅನೇಕ ವಿಶೇಷತೆಯ ತಾಣವಾಗಿರುವ ಭೀಮೇಶ್ವರ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ದಟ್ಟ ಅರಣ್ಯದ ನಡುವಿನಲ್ಲಿರುವ ಒಂದು ಪುಟ್ಟ ಗ್ರಾಮ. ಇದು ಸಾಗರ ಮತ್ತು ಭಟ್ಕಳ ಗಡಿಯಲ್ಲಿದೆ.
ಭೀಮೇಶ್ವರ ದೇವಸ್ಥಾನವು ಕರ್ನಾಟಕದ ಅತ್ಯಂತ ಹಳೆಯ ದೇವಾಲಯವಾಗಿದ್ದು, ಶಿವಲಿಂಗದ ಎದುರು ಭವ್ಯ ನಂದಿಯ ವಿಗ್ರಹವಿರುವ ನಂದಿ ಮಂಟಪ,ಪಕ್ಕದಲ್ಲಿ ಗಣಪತಿ ನಾಗನ ವಿಗ್ರಹ ಸಹ ಇದೆ. ವಿಜಯನಗರ ಕಾಲದ ಅವನತಿಯ ನಂತರ ಈ ಭಾಗವು ಗೇರುಸೊಪ್ಪೆಯ ರಾಣಿ ಚೆನ್ನ ಭೈರಾದೇವಿಯ ಆಳ್ವಿಕೆಗೆ ಒಳಪಟ್ಟಿತು ಎಂದು ಹೇಳಲಾಗುತ್ತದೆ.
ನಂತರ ಕೆಳದಿ ಅರಸರು ಆ ನಂತರ ಒಡೆಯರ ಆಳ್ವಿಕೆಯ ಭಾಗವಾಗಿದ್ದಿತು ಎಂದೂ ಹೇಳಲಾಗಿದೆ. ಇತಿಹಾಸ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದ ಪ್ರವಾಸೋದ್ಯಮ ಇಲಾಖೆಯು ಈ ಬಗ್ಗೆ ಸರಿಯಾದ ಗಮನ ಹರಿಸಬೇಕಾದ ಅನಿವಾರ್ಯತೆ ಇದೆ. ಭೀಮೇಶ್ವರ ದೇವಸ್ಥಾನವು ಜಲಪಾತಗಳನ್ನು ಸಹ ಹೊಂದಿದ್ದು, ಮಳೆಗಾಲದಲ್ಲಿ ಇದು ಇನ್ಬಷ್ಟು ಸುಂದರವಾಗಿರುತ್ತದೆ.
ಸಾಗರ ನಗರದಿಂದ ೬೨ ಕಿಲೋಮೀಟರ್ ಹಾಗೂ ಭಟ್ಕಳ ನಗರದಿಂದ ಕೇವಲ ೪೫ ಕಿ.ಮಿ.ದೂರದಲ್ಲಿದೆ ಭೀಮೇಶ್ವರ. ಇಲ್ಲಿ ಭೀಮೇಶ್ವರನ ಭವ್ಯ ಲಿಂಗವನ್ನು ಕಾಣಬಹುದು. ಪಕೃತಿಯ ನಡುವೆ ಇರುವ ಈ ದೇವಾಲಯದ ಪಕ್ಕದಲ್ಲೇ ೫೦ ಅಡಿ ಎತ್ತರಿಂದ ಧುಮುಕುವ ಭೀಮೇಶ್ವರ ಜಲಪಾತವನ್ನು ಕಾಣಬಹುದು. ವರ್ಷಪೂರ್ತಿ ಧುಮುಕುವ ಈ ಜಲಪಾತವೂ ಎಂದಿಗೂ ಬತ್ತಿದ್ದೇ ಇಲ್ಲವಂತೆ. ಮಳೆಗಾಲಂತೂ ಇದರ ಸೊಬಗನ್ನು ವರ್ಣಿಸಲು ಪದಗಳೇ ಸಾಲದು ರುದ್ರರಮಣೀಯವಾಗಿ ಕಾಣುತ್ತದೆ ಈ ಜಲಪಾತದ ಸೊಬಗು..ಈ ಅನುಭವನ್ನು ಅನುಭವಿಸಿಯೇ ತಿಳಿಯಬೇಕು.
ಪಶ್ಚಿಮ ಘಟ್ಟದ ದಟ್ಟಾರಣ್ಯದ ಮದ್ಯೆ ದೇವಾಲಯ ಇರುವುದರಿಂದ ನೈಸರ್ಗಿಕವಾಗಿ ಸದಾ ಹಸಿರೇ ತುಂಬಿಕೊಂಡಿರುತ್ತದೆ. ಇಲ್ಲಿ ವಿವಿಧ ರೀತಿಯ ಗಿಡ ಮರಗಳು, ಹಲವಾರು ರೀತಿಯ ಚಿಟ್ಟೆಗಳು, ಬಗೆಬಗೆಯ ಪಕ್ಷಿಗಳು, ಮಂಗಗಳು ಮತ್ತು ಸಿಗಂಳಿಕಗಳು ಕಾಡುಕೋಣ ಮೊದಲಾದ ವಿಶೇಷ ಜಾತಿಯ ಕಾಡುಪ್ರಾಣಿಗಳು ಕಾಣಸಿಗುತ್ತವೆ. ಸದಾ ಭಕ್ತಾದಿಗಳು ಬರುವ ಕಾರಣ ಇಲ್ಲಿ ನಿತ್ಯವೂ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಪ್ರತಿವರ್ಷ ಶಿವರಾತ್ರಿಯಂದು ಭೀಮೇಶ್ವರ ಜಾತ್ರೆ ನಾಲ್ಕು ದಿನಗಳ ಕಾಲ ನಡೆಯುತ್ತದೆ. ಪ್ರತಿ ಹುಣ್ಣಿಮೆ ಮತ್ತು ಅಮವ್ಯಾಸೆಯಂದು ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ ಎನ್ನುತ್ತಾರೆ ಅರ್ಚಕರು.
ಸಾಗರದಿಂದ ಭಟ್ಕಳಕ್ಕೆ, ಕೋಗಾರು ಮಾರ್ಗದಲ್ಲಿ ಹೋಗುವ ಎಲ್ಲ ಬಸ್ಸುಗಳೂ ಭೀಮೇಶ್ವರ ಕ್ರಾಸ್ ನಲ್ಲಿ ನಿಂತು ಮುಂದೆ ಸಾಗುತ್ತದೆ. ಅಲ್ಲಿಂದ ಮಣ್ಣಿನ ರಸ್ಥೆಯಲ್ಲಿ ೨ ಕಿಲೋಮೀಟರ್ ನಡೆದು ಕೊಂಡು ಹೋದರೆ ಭೀಮೇಶ್ವರನ ಕಾಣಬಹುದಾಗಿದೆ. ಈಗ ಇಲ್ಲಿ ಬಾಡಿಗೆಗೆ ಜೀಪ್ ವ್ಯವಸ್ಥೆ ಇದೆ. ಈ ವಾಹನದಲ್ಲಿ ಹೊರಟರೆ ದೇವಸ್ಥಾನದ ಹತ್ತಿರದವರೆಗೂ ಸುಲಭವಾಗಿ ಹೋಗಬಹುದು. ರಸ್ತೆ ದುರ್ಗಮವಾಗಿರುವ ಕಾರಣ ಸ್ವಂತ ವಾಹನ ಓಡಿಸುವಾಗ ತುಂಬಾ ಜಾಗೃತೆ ಇರಬೇಕು. ಕಾಲ್ನಡಿಗೆಯಲ್ಲಿ ಸಾಗುವವರಿಗೆ ಒಂದು ಅದ್ಭುತ ಚಾರಣದ ಅನುಭವವಾಗುತ್ತದೆ. ಸುತ್ತಲೂ ಹಸಿರು, ಹಕ್ಕಿಗಳ ಕಲರವ ಹಳ್ಳದ ನೀರಿನ ಜುಳುಜುಳು ನಿನಾದ ಪ್ರಕೃತಿ ಪ್ರಿಯರಿಗೆ ಇದು ಹಬ್ಬದಂತೆ. ತುಸು ಆಯಾಸವಾದರೂ ಅವರ ಖುಷಿ ಇಮ್ಮಡಿಯಾಗುವುದರಲ್ಲಿ ಸಂದೇಹವಿಲ್ಲ.
ಸಾಗರ-ತಾಳಗುಪ್ಪ-ಕಾರ್ಗಲ್-ಕೋಗಾರು ಮಾರ್ಗವಾಗಿ ಭೀಮೇಶ್ವರಕ್ಕೆ ೬೭ ಕಿ.ಮಿ. ಭಟ್ಕಳ ದಿಂದ ೪೫ ಕಿ.ಮಿ. ಹಾಗೂ ಸಿದ್ದಾಪುರ ದಿಂದ ೬೦ ಕಿ.ಮಿ. ಹಾಗೂ ಜೋಗದಿಂದ ೪೪ ಕಿ.ಮಿ.ಮಾತ್ರ. ದೂರದಿಂದ ಬರುವವರು ಭಟ್ಕಳ ಅಥವಾ ಜೋಗ್ ಫಾಲ್ಸ್ ಸಾಗರದಲ್ಲಿ ವಸತಿ ವ್ಯವಸ್ಥೆ ಮಾಡಿಕೊಳ್ಳಬಹುದಾಗಿದೆ.
ಒಟ್ಟಿನಲ್ಲಿ ಪ್ರಕೃತಿ ಪ್ರಿಯರಿಗೆ ಇತಿಹಾಸದ ಅಭ್ಯಾಸಿಗರಿಗೆ ಚಾರಣಿಗರಿಗೆ ಹೇಳಿ ಮಾಡಿಸಿದ ತಾಣ ಭೀಮೇಶ್ವರ. ಇನ್ನೂ ಯೋಚಿಸದಿರಿ ಈ ಎಲ್ಲ ಅನುಭವ ಸ್ವತಃ ಕಾಣಲೂ ಒಮ್ಮೆಯಾದರೂ ಭೀಮೇಶ್ವರನ ದರ್ಶನ ಮಾಡಲೇಬೇಕು ಎನ್ನುವುದು ನನ್ನ ಅಭಿಮತವೂ ಹೌದು.
ದೇವಾಲಯಗಳು ಕೇವಲ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕೇಂದ್ರಗಳು ಅಷ್ಟೇ ಅಲ್ಲದೆ ಐತಿಹಾಸಿಕ ಪ್ರಾಕೃತಿಕ ಹಾಗೂ ಪರಂಪರೆಯನ್ನು ಸಾರುವ ಪ್ರಮುಖ ಶೃದ್ಧಾ ಕೇಂದ್ರವೂ ಹೌದು. ಇಂತಹ ಒಂದು ಐತಿಹಾಸಿಕ ಪ್ರಾಕೃತಿಕ ಹಾಗೂ ಪರಂಪರೆಯ ಹಿರಿಮೆ ಸಾರುವಂತ ಪ್ರಮುಖ ದೇವಾಲಯಗಳಲ್ಲಿ ಒಂದು ಭೀಮೇಶ್ವರ ದೇವಾಲಯ. ಭೀಮೇಶ್ವರ ಪಾಂಡವರ ಅಜ್ಞಾತ ವಾಸದ ಕಾಲದಲ್ಲಿ ಭೀಮನಿಂದ ಪ್ರತಿಷ್ಠಾಪಿಸಲ್ಪಟ್ಟ ದೇವಾಲಯವಾಗಿದೆ ಎನ್ನಲಾಗುತ್ತದೆ .ದೇವಾಲಯವಷ್ಟೇ ಅಲ್ಲದೆ ಸದಾ ದುಮ್ಮಿಕ್ಕುವ ಭವ್ಯ ಜಲಪಾತ ಹಸಿರು ಬೆಟ್ಟ ಗುಡ್ಡ ಅನೇಕ ವಿಶೇಷತೆಯ ತಾಣವಾಗಿರುವ ಭೀಮೇಶ್ವರ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ದಟ್ಟ ಅರಣ್ಯದ ನಡುವಿನಲ್ಲಿರುವ ಒಂದು ಪುಟ್ಟ ಗ್ರಾಮ. ಇದು ಸಾಗರ ಮತ್ತು ಭಟ್ಕಳ ಗಡಿಯಲ್ಲಿದೆ.
ಭೀಮೇಶ್ವರ ದೇವಸ್ಥಾನವು ಕರ್ನಾಟಕದ ಅತ್ಯಂತ ಹಳೆಯ ದೇವಾಲಯವಾಗಿದ್ದು, ಶಿವಲಿಂಗದ ಎದುರು ಭವ್ಯ ನಂದಿಯ ವಿಗ್ರಹವಿರುವ ನಂದಿ ಮಂಟಪ,ಪಕ್ಕದಲ್ಲಿ ಗಣಪತಿ ನಾಗನ ವಿಗ್ರಹ ಸಹ ಇದೆ. ವಿಜಯನಗರ ಕಾಲದ ಅವನತಿಯ ನಂತರ ಈ ಭಾಗವು ಗೇರುಸೊಪ್ಪೆಯ ರಾಣಿ ಚೆನ್ನ ಭೈರಾದೇವಿಯ ಆಳ್ವಿಕೆಗೆ ಒಳಪಟ್ಟಿತು ಎಂದು ಹೇಳಲಾಗುತ್ತದೆ.ನಂತರ ಕೆಳದಿ ಅರಸರು ಆ ನಂತರ ಒಡೆಯರ ಆಳ್ವಿಕೆಯ ಭಾಗವಾಗಿದ್ದಿತು ಎಂದೂ ಹೇಳಲಾಗಿದೆ. ಇತಿಹಾಸ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದ ಪ್ರವಾಸೋದ್ಯಮ ಇಲಾಖೆಯು ಈ ಬಗ್ಗೆ ಸರಿಯಾದ ಗಮನ ಹರಿಸಬೇಕಾದ ಅನಿವಾರ್ಯತೆ ಇದೆ. ಭೀಮೇಶ್ವರ ದೇವಸ್ಥಾನವು ಜಲಪಾತಗಳನ್ನು ಸಹ ಹೊಂದಿದ್ದು, ಮಳೆಗಾಲದಲ್ಲಿ ಇದು ಇನ್ಬಷ್ಟು ಸುಂದರವಾಗಿರುತ್ತದೆ.
ಸಾಗರ ನಗರದಿಂದ ೬೨ ಕಿಲೋಮೀಟರ್ ಹಾಗೂ ಭಟ್ಕಳ ನಗರದಿಂದ ಕೇವಲ ೪೫ ಕಿ.ಮಿ.ದೂರದಲ್ಲಿದೆ ಭೀಮೇಶ್ವರ. ಇಲ್ಲಿ ಭೀಮೇಶ್ವರನ ಭವ್ಯ ಲಿಂಗವನ್ನು ಕಾಣಬಹುದು. ಪಕೃತಿಯ ನಡುವೆ ಇರುವ ಈ ದೇವಾಲಯದ ಪಕ್ಕದಲ್ಲೇ ೫೦ ಅಡಿ ಎತ್ತರಿಂದ ಧುಮುಕುವ ಭೀಮೇಶ್ವರ ಜಲಪಾತವನ್ನು ಕಾಣಬಹುದು. ವರ್ಷಪೂರ್ತಿ ಧುಮುಕುವ ಈ ಜಲಪಾತವೂ ಎಂದಿಗೂ ಬತ್ತಿದ್ದೇ ಇಲ್ಲವಂತೆ. ಮಳೆಗಾಲಂತೂ ಇದರ ಸೊಬಗನ್ನು ವರ್ಣಿಸಲು ಪದಗಳೇ ಸಾಲದು ರುದ್ರರಮಣೀಯವಾಗಿ ಕಾಣುತ್ತದೆ ಈ ಜಲಪಾತದ ಸೊಬಗು..ಈ ಅನುಭವನ್ನು ಅನುಭವಿಸಿಯೇ ತಿಳಿಯಬೇಕು.ಪಶ್ಚಿಮ ಘಟ್ಟದ ದಟ್ಟಾರಣ್ಯದ ಮದ್ಯೆ ದೇವಾಲಯ ಇರುವುದರಿಂದ ನೈಸರ್ಗಿಕವಾಗಿ ಸದಾ ಹಸಿರೇ ತುಂಬಿಕೊಂಡಿರುತ್ತದೆ. ಇಲ್ಲಿ ವಿವಿಧ ರೀತಿಯ ಗಿಡ ಮರಗಳು, ಹಲವಾರು ರೀತಿಯ ಚಿಟ್ಟೆಗಳು, ಬಗೆಬಗೆಯ ಪಕ್ಷಿಗಳು, ಮಂಗಗಳು ಮತ್ತು ಸಿಗಂಳಿಕಗಳು ಕಾಡುಕೋಣ ಮೊದಲಾದ ವಿಶೇಷ ಜಾತಿಯ ಕಾಡುಪ್ರಾಣಿಗಳು ಕಾಣಸಿಗುತ್ತವೆ. ಸದಾ ಭಕ್ತಾದಿಗಳು ಬರುವ ಕಾರಣ ಇಲ್ಲಿ ನಿತ್ಯವೂ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಪ್ರತಿವರ್ಷ ಶಿವರಾತ್ರಿಯಂದು ಭೀಮೇಶ್ವರ ಜಾತ್ರೆ ನಾಲ್ಕು ದಿನಗಳ ಕಾಲ ನಡೆಯುತ್ತದೆ. ಪ್ರತಿ ಹುಣ್ಣಿಮೆ ಮತ್ತು ಅಮವ್ಯಾಸೆಯಂದು ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ ಎನ್ನುತ್ತಾರೆ ಅರ್ಚಕರು.