ಶಿಕ್ಷಕಿ ಡಾ. ವಿದ್ಯಾ.ಕೆ ಅವರಿಗೆ ಭಾರತೀಯ ಶಿಕ್ಷಣ ರತ್ನ ಅವಾರ್ಡ
ಮೂಡಿಗೆರೆ : Anyelp group ರವರು 2025 ನೇ ಸಾಲಿನ ಸರ್ವಪಲ್ಲಿ ರಾಧಾಕೃಷ್ಣನ್ ಅವರ ನೆನಪಿನ ಪ್ರಯುಕ್ತ ಭಾರತದ ವಿವಿಧ ಜಿಲ್ಲೆಗಳಿಂದ ಶಿಕ್ಷಕರಾಗಿ ಹಾಗೂ ಕಲಾ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವಂತಹ ಅತ್ಯುತ್ತಮ ಶಿಕ್ಷಕರನ್ನು ಆಯ್ಕೆ ಮಾಡಿ ಅವರಿಗೆ ಸನ್ಮಾನ ಮಾಡಲಾಯಿತು.
ಅದೇ ರೀತಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೆಥನಿ ಶಾಲೆಯ ಕನ್ನಡ ಶಿಕ್ಷಕಿ ಹಾಗೂ ಕಲಾ ಕ್ಷೇತ್ರದಲ್ಲಿ ಈಗಾಗಲೇ ಅನೇಕ ಸಾಧನೆಯನ್ನು ಮಾಡಿರುವ ಡಾ. ವಿದ್ಯಾ. ಕೆ ಇವರು ಆಯ್ಕೆಯಾಗಿರುವುದು ನಿಜಕ್ಕೂ ಒಂದು ಹೆಮ್ಮೆಯ ವಿಷಯವಾಗಿದೆ.
ಇವರಿಗೆ ಸಪ್ಟೆಂಬರ್ 12ರಂದು ಬೆಂಗಳೂರಿನ ವಸಂತನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಅದ್ದೂರಿಯಾಗಿ ಸ್ವಾಗತವನ್ನು ಕೋರುವ ಮೂಲಕ, ಎಲ್ಲಾ ಗಣ್ಯರ ಸಮ್ಮುಖದಲ್ಲಿ ಭಾರತ ಶಿಕ್ಷಣ ರತ್ನ ಪ್ರಶಸ್ತಿಯನ್ನು ಹೆಸರಾಂತ ಚಿತ್ರನಟ ಚೇತನ್ ರವರು ನೀಡಿ ಗೌರವಿಸಿದರು.
ಡಾ. ವಿದ್ಯಾ.ಕೆ ಅವರು ಬಹುಮುಖ ಪ್ರತಿಭೆಯಾಗಿದ್ದು, ಉತ್ತಮ ನಿರೂಪಕಿ, ಉತ್ತಮ ಗಾಯಕಿ, ಅಷ್ಟೇ ಅಲ್ಲದೆ ಮಲೇಶಿಯಾದಲ್ಲಿ ನಡೆದಂತಹ ಭರತನಾಟ್ಯ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಶಿಕ್ಷಕಿ ವಿದ್ಯಾ ರವರು ಶಿಕ್ಷಣ ಕ್ಷೇತ್ರ, ಶಿಕ್ಷಣ ವೃತ್ತಿಯಿಂದ ಇಡೀ ತಾಲೂಕಿಗೆ ಕೀರ್ತಿಯನ್ನು ತಂದಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ.