
ದರ್ಶನ್ ಅಭಿನಯದ ‘ದಿ ಡೆವಿಲ್’ ಆರಂಭದಲ್ಲೇ ದಾಖಲೆಯ ಗೆರನ್ನು ತಲುಪಿ ಸಂಚಲನ ಸೃಷ್ಟಿಸಿದೆ.
ಗುರುವಾರ ತೆರೆಗೆ ಬಂದ ಈ ಚಿತ್ರಕ್ಕೆ ಅಭಿಮಾನಿಗಳಿಂದ ಅದ್ಭುತ ಪ್ರತಿಕ್ರಿಯೆ ಸಿಕ್ಕಿದ್ದು, ಬಿಡುಗಡೆ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಭಾರೀ ವಹಿವಾಟು ದಾಖಲಾಗಿದೆ.

ಚಿತ್ರರಂಗದ ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ‘ದಿ ಡೆವಿಲ್’ ಮೊದಲ ದಿನ ಸುಮಾರು ₹13.8 ಕೋಟಿ ಗಳಿಕೆ ದಾಖಲಿಸಿದೆ ಎನ್ನಲಾಗಿದೆ.
ಕನ್ನಡ ಸಿನಿಮಾ ಮಾರುಕಟ್ಟೆಯಷ್ಟೇ ಅಲ್ಲ, ಒಟ್ಟಾರೆ ದಕ್ಷಿಣ ಭಾರತದ ಮೊದಲ ದಿನದ ಕಲೆಕ್ಷನ್ ಪಟ್ಟಿಯಲ್ಲೂ ಈ ಸಿನಿಮಾ ಗಮನ ಸೆಳೆದಿದೆ.

ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್-ಸ್ಕ್ರೀನ್‌ಗಳಲ್ಲಿನ ಹೆಚ್ಚಿದ ಟಿಕೆಟ್ ದರಗಳು. ಪಿವಿಆರ್, ಐನಾಕ್ಸ್ ಮೊದಲಾದ ದೊಡ್ಡ ಶೃಂಖಲೆಯ ಚಿತ್ರಮಂದಿರಗಳಲ್ಲಿ ಟಿಕೆಟ್ ₹500 ರಷ್ಟಾಗಿದ್ದು, ಸಿಂಗಲ್ ಥಿಯೇಟರ್‌ಗಳಲ್ಲಿ ₹400ರ ಮಟ್ಟಿಗೆ ದರ ನಿಶ್ಚಯಗೊಂಡಿತ್ತು. ಇದರ ಪರಿಣಾಮವಾಗಿ ವಸೂಲಿ ಗಣನೀಯವಾಗಿ ಏರಿಕೆಯಾಗಿದೆ ಎಂದು ವಲಯದಲ್ಲಿ ಚರ್ಚೆ ನಡೆದಿದೆ.

ಯಾವಾಗಲೂ ಅಭಿಮಾನಿಗಳಿಂದ ವಿಶೇಷ ನಿರೀಕ್ಷೆ ಇರುವ ದರ್ಶನ್, ಈ ಬಾರಿ ‘ದಿ ಡೆವಿಲ್’ ಮೂಲಕ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ. ವಿಶೇಶವೆಂದರೆ, ಈ ಸಿನಿಮಾ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರದ ಮೊದಲ ದಿನದ ಕಲೆಕ್ಷನ್ ದಾಖಲೆಯನ್ನು ಸಹ ಮೀರಿಸಿದೆ.
ಈ ಮೂಲಕ ‘ಡೆವಿಲ್’ ದರ್ಶನ್ ಅವರ ವೃತ್ತಿಜೀವನದಲ್ಲಿ ಹೊಸ ದಾಖಲೆ ನಿರ್ಮಿಸಿದೆ.

