ಕುಮಟಾದಲ್ಲಿ ಮಾಜಿ ಸಚಿವ ಆರ್.ವಿ. ದೇಶಪಾಂಡೆ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರ ಬ್ರಹತ ಸಭೆ
ಕುಮಟಾ-ಕುಮಟಾದ ಮಣಕಿ ಮೈದಾನದಲ್ಲಿ ಹಮ್ಮಿಕೊಂಡ ಕಾಂಗ್ರೆಸ್ಸಿನ ‘ಬ್ರಹತ್ ಜನಜಾಗ್ರತಿ ಸಮಾವೇಶ’ದ ಪೂರ್ವಭಾವಿ ಸಭೆಯು ಮಾಜಿ ಸಚಿವ ಆರ್.ವಿ.ದೇಶಪಾಂಡೆಯವರ ಅಧ್ಯಕ್ಷತೆಯಲ್ಲಿ ಕುಮಟಾದ ಬ್ಲಾಕ್ ಕಾಂಗ್ರೆಸ್ಸಿನ ಕಛೇರಿಯಲ್ಲಿ ಜರುಗಿತು. ಸಭೆಯನ್ನು ದೀಪ ಬೆಳಗುವುದರ ಮೂಲಕ ವಿದ್ಯುಕ್ತವಾಗಿ ಉದ್ಘಾಟಿಸಿದ ಮಾತನಾಡಿದರು ಇದೇ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ, ಅನ್ಯಾಯದ ವಿರುದ್ದ ಮತ್ತು ಬಡವರ ಪರವಾಗಿ ಹೋರಾಟ ಮಾಡಿದಂತಹ ಶ್ರೀಮತಿ ಇಂದಿರಾ ಗಾಂಧಿಯವರ 106 ಜನ್ಮದಿನದ ಕುರಿತು ದೇಶಪಾಂಡೆಯವರು ಮಾತನಾಡಿದರು. ನವೆಂಬರ 24 ರಂದು ನಡೆಯುವ ಸಮಾವೇಶ ಸ್ವಯಂ ಪ್ರೇರಣೆಯಿಂದ, ಸ್ವಾಭಿಮಾನದಿಂದ ಆಗಬೇಕೆಂದು ಕರೆನೀಡಿದರು. ರಾಜ್ಯ ಉಪಾಧ್ಯಕ್ಷ ಐವಾನ್ ಡಿಸೋಜರವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಸಮಾವೇಶದ ರೂಪುರೇಷೆಗಳ ಬಗೆಗೆ ಮಾಹಿತಿ ನೀಡಿದರು ಮತ್ತು ಹಾಲಿ ಬಿಜೆಪಿ ಸರ್ಕಾರದ ವೈಫಲ್ಯವನ್ನು ಎತ್ತಿ ಹೇಳಿದರು. ಹಿಂದಿನ ಶಾಸಕರಾದ ಸನ್ಮಾನ್ಯ ಮಂಕಾಳ್ ವೈದ್ಯ, ಸತೀಶ ಶೈಲ್, ಶಾರದಾ ಶೆಟ್ಟಿ
ರಾಜ್ಯ ಪ್ರಧಾನ ಕಾರ್ಯದರ್ಶಿ ರಮಾನಂದ ನಾಯಕ, ಆರ್.ಎಚ್.ನಾಯ್ಕ ಕಾಗಲ್, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಅಬ್ದುಲ್ ಮಜೀದ, ಮಹಿಳಾ ಕಾಂಗ್ರೆಸ್ಸಿನ ಜಿಲ್ಲಾಧ್ಯಕ್ಷೆ ಸುಜಾತ ಗಾಂವ್ಕರ, ವಿವಿಧ ತಾಲ್ಲೂಕಿನ ಬ್ಲಾಕ್ ಅಧ್ಯಕ್ಷರುಗಳು,ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಪ್ರಸನ್ನ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ಸಿನ ಅಧ್ಯಕ್ಷ ಸಂತೋಷ ಶೆಟ್ಟಿ ತಾಲ್ಲೂಕಿನ ವಿವಿಧ ಘಟಕದ ಪದಾಧಿಕಾರಿಗಳು,ಕಾಂಗ್ರೆಸ್ ಪಕ್ಷದ ಎಂ.ಎಲ್.ಎ ಟಿಕೆಟ್ ಆಕಾಂಕ್ಷಿಗಳು , ಕಾರ್ಯಕರ್ತರು ಉಪಸ್ಥಿತರಿದ್ದರು.