ವಿದ್ಯಾರ್ಥಿನಿಯಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕಾಮುಕ ಶಿಕ್ಷಕ ಪಾಲೇಶ ಬಂಧನ
ರಾಯಚೂರು- 13 ವರುಷದ ವಿದ್ಯಾರ್ಥಿನಿಯೊಬ್ಬಳೊಂದಿಗೆ ಕೆಟ್ಟ ದಾಗಿ ವರ್ತನೆ ಮಾಡಿದ ಆರೋಪದ ಮೇಲೆ ಶಿಕ್ಷಕ ರೊಬ್ಬರನ್ನು ಸಿರಿವಾರ ಪೊಲೀಸರು ಬಂಧನ ಮಾಡಿದ್ದಾರೆ. ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನಲ್ಲಿ ಅತಿಥಿ ಶಿಕ್ಷಕ ಪಾಲೇಶ ಎನ್ನುವಾತ ಈ ನೀಚ ಕೃತ್ಯ ಮಾಡಿದ ಆರೋಪಕ್ಕೆ ಗುರಿಯಾಗಿದ್ದಾರೆ. ತಾನು ಅತಿಥಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಾಲೆಯ ವಿದ್ಯಾರ್ಥಿ ನಿಯನ್ನೇ ಈತ ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ ಇದೇ ರೀತಿ ಎರಡು ಮೂರು ದಿನ ಗಳ ಕಾಲ ಶಿಕ್ಷಕ ಪಾಲೇಶ ವಿದ್ಯಾರ್ಥಿನಿಯನ್ನು ಕರೆದುಕೊಂಡು ಹೋಗಿದ್ದ ಕುರಿತಂತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖವಾಗಿದ್ದು
ಇದಾದ ಮೇಲೆ ಸಿರವಾರ ಪೊಲೀಸ್ ಠಾಣೆಯಲ್ಲಿ ಪೊಕ್ಸೋ ಪ್ರಕರಣ ದಾಖಲು ಮಾಡಲಾಗಿತ್ತು ಈ ಪ್ರಕರಣದ ಹಿನ್ನೆಲೆ ಆರೋಪಿ ಪಾಲೇಶನನ್ನು ಸಿರವಾರ ಪೊಲೀಸರು ಬಂಧಿಸಿದ್ದಾರೆ. 13 ವರ್ಷ ಪ್ರಾಯದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಪುಸಲಾ ಯಿಸಿ ಕರೆದುಕೊಂಡು ಹೋಗಿದ್ದ ಆರೋಪಿ ಅತಿಥಿ ಶಿಕ್ಷಕನನ್ನು ವಿಚಾರಣೆ ಮಾಡಲಾಗುತ್ತಿದ್ದು ನಂತರ ಪೊಲೀಸರು ಮುಂದಿನ ಕ್ರಮ ಜರುಗಿಸಲಿದ್ದಾರೆ.