ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಲಂಚಬಾಕ ಪಿಡಿಒ ಲಿಂಗಾಚಾರ್
*ದಾವಣಗೆರೆ -ದಾವಣಗೆರೆಯ ಕಕ್ಕರಗೋಳ ಗ್ರಾಮ ಪಂಚಾಯಿತಿ ಪಿಡಿಒವೊಬ್ಬರು ಲಂಚಕ್ಕೆ ಬೇಡಿಕೆ ಇಟ್ಟು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.*
*ಕಕ್ಕರಗೋಳ ಗ್ರಾಮ ಪಂಚಾಯಿತಿ ಪಿಡಿಒ ಲಿಂಗಾಚಾರ್ ರೈತರೊಬ್ಬರಿಗೆ ಇ ಸ್ವತ್ತು ಮಾಡಿಸಿಕೊಡುವ ಸಲುವಾಗಿ 2 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.*
*ಅಂತೆಯೇ ನಗರದ ಕೊಂಡಜ್ಜಿ ರಸ್ತೆ ಆರ್‌ಟಿಒ ಕಚೇರಿ ಬಳಿ ಮಂಜುನಾಥ್ ಎಂಬ ರೈತನಿಂದ 2 ಸಾವಿರ ರೂಪಾಯಿ ಪಡೆದು ಕೊಳ್ಳುತ್ತಿದರು.*
*ಈ ವೇಳೆ ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪುರೆ ನೇತೃತ್ವದಲ್ಲಿ ಡಿವೈಎಸ್ಪಿ ರಾಮಕೃಷ್ಣ ಹಾಗೂ ಇನ್ಸ್‌ಪೆಕ್ಟರ್ ಆಂಜನೇಯ ಅವರಿದ್ದ ತಂಡ ದಾಳಿ ನಡೆಸಿ ಭ್ರಷ್ಟ ಅಧಿಕಾರಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.*