ಮೂರನೇ ತರಗತಿ ಬಾಲಕಿ ಖುಷಿ ಸಾವು
ಸುಳ್ಯ-ಮೂರನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಗಂಭೀರ ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟ ಘಟನೆ ಸುಳ್ಯದ ಅರಂತೋಡು ಗ್ರಾಮದಲ್ಲಿ ನಡೆದಿದೆ.
ಅರಂತೋಡು ನಿವಾಸಿ ಯೋಗೀಶ್ ಅವರ ಪುತ್ರಿ ಖುಷಿ (8) ಮೃತ ಬಾಲಕಿ.ಕ್ಯಾನ್ಸರ್ ಮತ್ತು ಬ್ರೈನ್ ಟ್ಯೂಮರ್ನಿಂದ ಬಾಲಕಿ ಬಳಲುತ್ತಿದ್ದಳು ಎನ್ನಲಾಗಿದ್ದು, ಇದೀಗ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.
ಅರಂತೋಡು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದ ಬಾಲಕಿ ಖುಷಿ ನಿಧನಕ್ಕೆ ಎಲ್ಲರೂ ಕಂಬನಿ ಮಿಡಿದಿದ್ದಾರೆ.
ಮೃತ ಬಾಲಕಿ ತಂದೆ ಯೋಗೀಶ್, ತಾಯಿ ಲಲಿತಾರನ್ನು ಅಗಲಿದ್ದಾರೆ.