ಲೋಕಾಯುಕ್ತ ಬಲೆಗೆ ಬಿದ್ದ ಲಂಚಬಾಕ ಎಪಿಎಂಸಿ ಅಡಿಟರ್ ಶಂಕರಯ್ಯ
ವಿಜಯಪುರ : ವಿಜಯಪುರದ ಎಪಿಎಂಸಿ ಆಂತರಿಕ ಲೆಕ್ಕಪರಿಶೋಧಕ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಶಂಕರಯ್ಯ ಎಂಬಾತನೇ ಲೋಕಾಯುಕ್ತ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿರುವ ಲೆಕ್ಕಪರಿಶೋಧಕ. ಶಂಕರಯ್ಯ ವಿಜಯಪುರದ ಎಪಿಎಂಸಿ ಆಂತರಿಕ
ಲೆಕ್ಕಪರಿಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಇನ್ನೂ ವ್ಯಾಪಾರ ಮಾಡುವುದಕ್ಕಾಗಿ ಟ್ರೇಡಿಂಗ್ ಲೈಸೆನ್ಸ್ ಕೊಡಲು 5 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಶಂಕರಯ್ಯನನ್ನು ಬಂಧಿಸಿದ್ದಾರೆ. ಅಲ್ಲದೇ ದಾಳಿ ವೇಳೆ ಹೆಚ್ಚುವರಿಯಾಗಿ ಸಿಕ್ಕ 39 ಸಾವಿರ ರೂಪಾಯಿ ಹಣವನ್ನು ಜಪ್ತಿ ಮಾಡಿದ್ದಾರೆ.