ವಿದ್ಯಾರ್ಥಿನಿಯನ್ನು ಅಪಹರಿಸಿ ಯುವಕರಿಂದ ಅತ್ಯಾಚಾರ -ಆರೋಪಿಗಳಿಗಾಗಿ ಪೊಲೀಸರಿಂದ ಶೋದ
ಹೊಸಪೇಟೆ-ಒಂಬತ್ತು ವರ್ಷದ ಬಾಲಕಿಯೋರ್ವಳನ್ನು ಅಪಹರಿಸಿ ಅತ್ಯಾಚಾರ ನಡೆಸಿದ ಘಟನೆ ಹೊಸಪೇಟೆಯ ಸಿಂಧನೂರು ಬಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಿಂದನೂರು ನಿವಾಸಿಯಾಗಿರುವ ವಿದ್ಯಾರ್ಥಿನಿಯು ಶಾಲೆಯೊಂದರಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ.
ವಿದ್ಯಾರ್ಥಿನಿಯು ( ನ.25ರಂದು ತನ್ನ ತಾಯಿಯ ತವರೂರಾದ ಹೊಸ ಪೇಟೆಗೆ ಹೋಗಿದ್ದಳು. ಪುನಃ ನ.27 ರಂದು ಹೊಸಪೇಟೆಯಿಂದ ಸಿಂಧನೂರಿಗೆ ವಾಪಸ್ ಬರುವ ವೇಳೆ ಬಸ್ ನಿಲ್ದಾಣದಲ್ಲಿ ನಿಂತಿದ್ದ ಅಪ್ರಾಪ್ತೆಯನ್ನು ಆರೋಪಿ ಸಚಿನ್ ಮತ್ತು ಆತನ ಗೆಳೆಯ ಇಬ್ಬರೂ ಸೇರಿ ಅಪಹರಿಸಿದ್ದಾರೆ. ತದನಂತರಲ್ಲಿ ಇಬ್ಬರು ಆರೋಪಿಗಳು ಮಧ್ಯಪಾನ ಮಾಡಿದ್ದು, ಗಂಗಾವತಿಯಿಂದ ಹೊಸಪೇಟೆಗೆ ಹೋಗುವ ವೇಳೆ ಮಾರ್ಗಮಧ್ಯದಲ್ಲಿ ಕಾರಿನಲ್ಲೆ ಸಚಿನ್ ಎಂಬಾತ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಅಲ್ಲದೆ ಆತನ ಸ್ನೇಹಿತ ಕೂಡ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಇಬ್ಬರು ಕುಡಿದ ಮತ್ತಿನಲ್ಲಿ ಈ ರೀತಿಯ ಹೇಯ ಕೃತ್ಯ ನಡೆಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯ ತಾಯಿ ಸಿಂಧನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಸಚಿನ್ ಹಾಗೂ ಆತನ ಸ್ನೇಹಿತ ತಲೆಮರೆಸಿಕೊಂಡಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.