ಕಲಬುರಗಿ ಪೊಲೀಸ್ ಆಯುಕ್ತರ ಪತ್ನಿ ರೂಪಾಲಿಯಿಂದ ಲಂಚಕ್ಕೆ ಬೇಡಿಕೆ ? ಆಡಿಯೋ ವೈರಲ್
ಕಲಬುರಗಿ-ಕಲಬುರಗಿ ಪೊಲೀಸ್ ಆಯುಕ್ತರ ಪತ್ನಿ ರೂಪಾಲಿಯಿಂದ ಲಂಚದ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ ಆಡಿಯೋವನ್ನು ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಬಿಡುಗಡೆ ಮಾಡಿದ್ದು, ಈಗ ಇದು ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.
ಈ ನಡುವೆ ಶಾಸಕ ಪ್ರಿಯಾಂಕ್ ಖರ್ಗೆ ಬಲಗೈ ಬಂಟರು ನನ್ನ ಹತ್ಯೆ ಮಾಡಲು ಸ್ಕೆಚ್ ಹಾಕಿದ್ದು, ಈ ಸಲುವಾಗಿ, 2 ದೇಶಿ ನಿರ್ಮಿತ ಪಿಸ್ತೂಲ್, 30 ಬುಲೆಟ್‌ಗಳನ್ನು ಖರೀದಿ ಮಾಡಿದ್ದು, ಇದಲ್ಲದೇ ಪಿಸ್ತೂಲ್ ಇದ್ದವರನ್ನು ಬಂಧಿಸಿರುವ ಪೋಲಿಸರು ಕೇಸ್‌ನಲ್ಲಿ ಪ್ರಿಯಾಂಕ್ ಖರ್ಗೆ ಬೆಂಬಲಿಗರ ಹೆಸರನ್ನು ತೆಗೆಯಲು ಡಿವೈಎಸ್‌ಪಿಯಿಂದ ಹಣವನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಇದಲ್ಲದೇ ಬುರಗಿ ಪೊಲೀಸ್ ಕಮಿಷನರ್ ಎನ್.ರವಿಕುಮಾರ್ ಪತ್ನಿ ದಾಂಡಿಯಾ ನೈಟ್ ಹೆಸರಿನಲ್ಲಿ 3 ಲಕ್ಷ ಹಣಕ್ಕೆ ಒತ್ತಡ ಹಾಕಿದ್ದಾರೆ ಅಂತ ಹೇಳಿದ್ದಾರೆ. ಈ ನಡುವೆ ತಮ್ಮ ಪತ್ನಿ ವಿರುದ್ದ ಕೇಳಿ ಬಂದಿರುವ ಆರೋಕ್ಕೆ ಪೊಲೀಸ್ ಆಯುಕ್ತ ಎನ್.ರವಿಕುಮಾರ್ ದಾಂಡೇಲಿ ನೃತ್ಯ ಆಯೋಜನೆ ವೇಳೇಯಲ್ಲಿ ಹಣವನ್ನು ಎಲ್ಲರಿಂದ ಪಡೆದುಕೊಳ್ಳಲಾಗಿದೆ. ಇದು ಒತ್ತಡದಿಂದ ಪಡೆದುಕೊಂಡಹಣವಲ್ಲ ಅಂತ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾರೆ.