ತಂದೆಯನ್ನು ಕೊಲೆ ಮಾಡಿ 30 ತುಂಡುಗಳಾಗಿ ಕತ್ತರಿಸಿ ಎಸೆದ ಮಗ- ರಾಜ್ಯದಲ್ಲೂ ದೆಹಲಿ ಮಾದರಿಯ ಬರ್ಬರ ಕೊಲೆ
ಬಾಗಲಕೋಟೆ-ದೆಹಲಿಯ ಶ್ರದ್ಧಾ ಕೊಲೆಯನ್ನು ಹೋಲುವ ಭೀಕರ ಕೊಲೆ ರಾಜ್ಯದಲ್ಲೂ ನಡೆದಿದೆ.ಮಗನೇ ತನ್ನ ತಂದೆಯನ್ನು ಕೊಂದು ದೇಹವನ್ನು 30 ತುಂಡುಗಳಾಗಿ ಕತ್ತರಿಸಿದ್ದಾನೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ಹೊರವಲಯದ ಮಂಟೂರ್ ಬೈಪಾಸ್ ಬಳಿ ಈ ಘಟನೆ ನಡೆದಿದೆ.
ಪರಶುರಾಮಪ್ಪ ಕುಳಲಿ (54) ಎಂಬಾತನನ್ನು ಮಗ ವಿಠ್ಠಲ ಕುಳಲಿ ರಾಡ್ ನಿಂದ ಹೊಡೆದು ಕೊಲೆ ಮಾಡಿ ದೇಹವನ್ನು 30 ಭಾಗಗಳಾಗಿ ಕತ್ತರಿಸಿದ್ದಾನೆ.
ಇದೀಗ ಆರೋಪಿ ವಿಠ್ಠಲ ಕುಳಲಿಯನ್ನು ಮುಧೋಳ ಪೊಲೀಸರು ಬಂಧಿಸಿದ್ದಾರೆ.
ಮೃತರ ಪತ್ನಿ ಸರಸ್ವತಿ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.ಪರಶುರಾಮ ಕುಡಿದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಕಾರಣಕ್ಕೆ ವಿಠ್ಠಲ್ ಕೊಲೆ ಮಾಡಿ ನಿರುಪಯುಕ್ತ ಬೋರ್ವೆಲ್ ನಲ್ಲಿ ಅಂಗಾಂಗಗಳನ್ನು ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.