ಅಪ್ರಾಪ್ತ ಹಿಂದು ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮುಸ್ಲಿಂ ಪುರುಷ ದಾವೂದ್ – ಮುಲ್ಕಿ ಪೋಲೀಸರಿಂದ ಫೋಕ್ಸೋ ಪ್ರಕರಣ ದಾಖಲು
ಮುಲ್ಕಿ-ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಸಮೀಪ ಅನ್ಯ ಕೋಮಿನ ವ್ಯಕ್ತಿಯೊಬ್ಬ ಅಪ್ರಾಪ್ತ ಹಿಂದು ಹುಡುಗಿಗೆ ಪದೇ ಪದೇ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾರಣ ಆಕ್ರೋಶಗೊಂಡ ಜನರು ಸರಿಯಾದ ಪಾಠ ಕಲಿಸಿದ ಘಟನೆ ಕೆರೆಕಾಡು ಎಂಬಲ್ಲಿ ನಡೆದಿದೆ.
ಈತನು ಹಳೆಯಂಗಡಿ ಕೊಪ್ಪಳ ನಿವಾಸಿ ದಾವೂದ್ ಎನ್ನಲಾಗಿದೆ. ಈತನಿಗೆ ಮದುವೆಯಾಗಿ ಎರಡು ಮಕ್ಕಳು ಇದ್ದಾರೆ ಎಂದು ತಿಳಿದುಬಂದಿದೆ. ಈತನ ನೀಚ ಕೃತ್ಯ ಬೆಳಕಿಗೆ ಬಂದಿದ್ದು ಸಾರ್ವಜನಿಕವಾಗಿ ಹಿಗ್ಗಾಮುಗ್ಗಾ ಒದೆ ಬಿದ್ದಿದೆ. ಡಿ. 13ರಂದು ಆರೋಪಿ ಬೈಕ್ನಲ್ಲಿ ಬಾಲಕಿಯನ್ನು ಹಿಂಬಾಲಿಸಿ ಬಂದು ಅಸಭ್ಯವಾಗಿ ವರ್ತಿಸಿದ್ದಾನೆ. ಶನಿವಾರ ಮತ್ತೆ ಅದೇ ಪ್ರದೇಶದಲ್ಲಿ ಆರೋಪಿ ಕಂಡು ಬಂದ ಹಿನ್ನೆಲೆಯಲ್ಲಿ ಕಟ್ಟಿ ಹಾಕಿ ಹೊಡೆದಿದ್ದಾರೆ.
ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದುದ್ದನ್ನು ಹುಡುಗಿ ಹೆತ್ತವರಿಗೆ ತಿಳಿಸಿದ ಪರಿಣಾಮ ಸಾರ್ವಜನಿಕರೇ ಆ ವ್ಯಕ್ತಿಯನ್ನು ಹಿಡಿದು ಮುಲ್ಕಿ ಪೋಲೀಸ್ ಠಾಣೆಗೆ ನೀಡಿದ್ದಾರೆ. ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಹಿಂದು ಜಾಗರಣ ವೇದಿಕೆ ಆಗ್ರಹಿಸಿದೆ. ಈ ಘಟನೆಯನ್ನು ಸಂಘಟನೆ ಪ್ರಮುಖರು ಶಾಸಕರ ಗಮನಕ್ಕೆ ತಂದಿದ್ದು ಆರೋಪಿಗೆ ಪೋಕ್ಸೋ ಕಾಯ್ಧೆ ವಿಧಿಸುವಂತೆ ಬಲವಾಗಿ ಸಂಘಟನೆ ಆಗ್ರಹಿಸಿದೆ.
ಈ ಸಂದರ್ಭ ಹಿಂಜಾವೇ ಕೆರೆಕಾಡು ಘಟಕದ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಮುಲ್ಕಿ ಪೊಲೀಸರು ದಾವೂದ್ ವಿರುದ್ಧ ಪೋಸ್ಕೋ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.