ಗಂಡನ ಆತ್ಮಹತ್ಯೆಯಿಂದ ಮನನೊಂದು 24 ವರ್ಷದ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ
ಬೆಂಗಳೂರು -ಬೆಂಗಳೂರಿನ ಓ ಫಾರಂ ಸಮೀಪ ರಾಮಯ್ಯ ಲೇಔಟ್ನಲ್ಲಿ ಗಂಡನ ಅಗಲಿಕೆ ನೋವಿನಿಂದ ಮನನೊಂದು ಪತ್ನಿಯೂ ನೇಣಿಗೆ ಶರಣಾಗಿರುವಂತಹ ಘಟನೆ ನಡೆದಿದೆ.
ಸೌಂದರ್ಯ (24) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ. ಮೃತಳಿಗೆ ಒಂದೂವರೆ ವರ್ಷದ ಗಂಡು ಮಗುವಿದೆ.
ಈಕೆಯ ಗಂಡ ಒಂದೂವರೆ ತಿಂಗಳ ಹಿಂದೆ ಕೆಲಸ ಮಾಡುತ್ತಿದ್ದ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಂದಿನಿಂದ ಸೌಂದರ್ಯ ತವರು ಮನೆಯಲ್ಲಿದ್ದರು. ಗಂಡನ ಸಾವಿನಿಂದ ನೊಂದಿದ್ದ ಖಿನ್ನತೆಯಿಂದ ಬಳಲುತ್ತಿದ್ದ ಸೌಂದರ್ಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.