ಹೆಡ್ ಮಾಸ್ಟರ್ ನೇತೃತ್ವದಲ್ಲಿ ಪ್ರತಿದಿನ ಮಧ್ಯಾಹ್ನ ಬಾರ್‌ಲ್ಲಿ ಎಣ್ಣೆ ಪಾರ್ಟಿ ಮಾಡುತಿದ್ದ 5 ಜನ ಕುಡುಕ ಶಿಕ್ಷಕರು ಮತ್ತು ಕುಡುಕ ಹೆಡ ಮಾಸ್ಟರ್ ಸಸ್ಪೆನ್ಡ್(ಅಮಾನತ್ತು)
ರಾಯಚೂರು -ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಕ್ಯಾಂಪಿನ ಪ್ರೌಢ ಶಾಲೆಯ ಶಿಕ್ಷಕರು ಪ್ರತಿದಿನ ಮಧ್ಯಾಹ್ನ ಬಾರ್‌ಗಳಲ್ಲಿ ಕುಳಿತು ಮತ್ತೇರಿಸಿಕೊಳ್ಳುತ್ತಿರುವ ಘಟನೆ ನಡೆದಿದೆ. ಸ್ವತಃ ಪೋಷಕರು ವಿಡಿಯೋ ಮಾಡಿ ಮಾಧ್ಯಮ ಮುಖಾಂತರ ಬಿಡುಗಡೆ ಮಾಡಿದ್ದರು. ಮುಖ್ಯಗುರುಗಳ ನೇತೃತ್ವದಲ್ಲಿ ಈ ಎಣ್ಣೆ ಪಾರ್ಟಿ ನಡೆಯುತ್ತದೆ ಎಂಬ ಆರೋಪ ಕೇಳಿಬಂದಿತ್ತು.. ದೈಹಿಕ ಶಿಕ್ಷಕ ಚನ್ನಪ್ಪ ರಾಠೋಡ್, ಶಿಕ್ಷಕರಾದ ಲಿಂಗಪ್ಪ ಪೂಜಾರ, ಕೇಶವ್ ಕುಮಾರ್, ಅಬ್ದುಲ್ ಅಜೀಜ್ ಎಂಬುವವರು ಸಹ ಬಾರ್‌ಗೆ ಹಾಜರಾಗುತ್ತಾರೆ ಎನ್ನಲಾಗಿತ್ತು. ಇವರು ಮಧ್ಯಾಹ್ನ ಊಟದ ಅವಧಿಯಲ್ಲಿ ಬಾರ್‌ಗಳಿಗೆ ಹೋಗಿ ಮೋಜು ಮಸ್ತಿ ಮಾಡುತ್ತಾರೆ ಎಂದು ಪೋಷಕರು ಆರೋಪಿಸಿದ್ದರು. ಹೋದವರು ಎಷ್ಟೋತ್ತಾದರೂ ಬರುವುದೇ ಇಲ್ಲ. ಒಂದುವೇಳೆ ಬಂದರೂ ಸಹ ಅವರು ಪಾಠ ಮಾಡುವ ಸ್ಥಿತಿಯಲ್ಲಿ ಇರುವುದಿಲ್ಲ ಎಂದು ಆರೋಪಿಸಿದರು.
ಶಿಕ್ಷಕರಾದವರೇ ಕುಡಿತಕ್ಕೆ ದಾಸರಾದರೆ ಮಕ್ಕಳಿಗೆ ಏನು ಪಾಠ ಮಾಡಬಹುದು ಎಂದು ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ಶಿಕ್ಷಕರು ಬಾರ್‌ಗಳಲ್ಲಿ ಕುಳಿತು ಮತ್ತೇರಿಸಿಕೊಳ್ಳುತ್ತಿರುವ ವಿಡಿಯೋ ಮಾಡಿ ಬಿಡುಗಡೆ ಮಾಡಿದ್ದರು.ಜೊತೆಗೆ ಜಿಪಿಎಸ್ ಅಳವಡಿಸಿ ತರಗತಿಗೆ ನಿಗದಿಯಾದ ಸಂದರ್ಭದಲ್ಲಿ ಶಾಲೆಯಲ್ಲಿ ಯಾರೂ ಇಲ್ಲದಿರುವ ಚಿತ್ರಗಳನ್ನು ತೆಗೆದಿದ್ದರು.
ಈ ಚಿತ್ರಗಳು ಮತ್ತು ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಎಲ್ಲ ಕಡೆ ವೈರಲ್ ಆಗಿತ್ತು. ಶಿಕ್ಷಕರನ್ನು ಅಮಾನತು ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಲಸಿದ್ದರು.ಆರೋಪ ಮೇಲ್ನೋಟಕ್ಕೆ ಸಾಬಿತಾದ ಹಿನ್ನಲೇ ಇದೀಗ ಶಿಕ್ಷಣ ಇಲಾಖೆ ಉನ್ನತ ಅಧಿಕಾರಿಗಳು 5 ಜನ ಕುಡುಕ ಶಿಕ್ಷಕರು ಮತ್ತು ಹೆಡ್ ಮಾಸ್ಟರ್ ನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.