ಡ್ಯೂಟಿ ಸಮಯದಲ್ಲಿ ಎಣ್ಣೆ ಕುಡಿದು ಫುಲ್ ಟೈಟ್ ಆಗಿ ಶಾಲಾ ಜಗುಲಿ ಮೇಲೆ ಮಲಗಿದ ಶಿಕ್ಷಕ ಕೃಷ್ಣಮೂರ್ತಿ ಸಸ್ಪೆನ್ಡ್ (ಅಮಾನತ್ತು)
ಉಡುಪಿ- ಕೆಲಸದ ಸಮಯದಲ್ಲಿ ಶಾಲಾ ಆವರಣದಲ್ಲಿ ಮದ್ಯಪಾನ ಮಾಡಿ ಮಲಗಿದ್ದ ಪೆರ್ಡೂರು ಸಮೀಪದ ಅಲಂಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೃಷ್ಣಮೂರ್ತಿ ನಾಯಕ್ ಅವರನ್ನು ಅಮಾತುಗೊಳಿಸಲಾಗಿದೆ.
ಬಡ ಮಕ್ಕಳ ಭವಿಷ್ಯ ರೂಪಿಸಬೇಕಾದ ಶಿಕ್ಷಕ ಮದ್ಯ ಸೇವಿಸಿ ಅಮಲಿನಲ್ಲಿ ತೇಲುತ್ತಾ ಶಾಲೆಯ ಜಗಲಿ ಮೇಲೆ ಸುಖ ನಿದ್ದೆ ಮಾಡಿದ್ದು, ಈ ಘಟನೆಗೆ ಪೆರ್ಡೂರು ಗ್ರಾ.ಪಂ. ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ, ಗ್ರಾಮಸ್ಥರು ಹಾಗೂ ಸಾಮಾಜಿಕ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಕ್ರಮಕ್ಕೆ ಆಗ್ರಹಿಸಿದ್ದರು.
ಘಟನೆಯ ಸತ್ಯಾಸತ್ಯತೆಯ ವರದಿ ಪರಿಶೀಲಿಸಿದ ಡಿಡಿಪಿಐ ಗಣಪತಿ ಕೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಕುಡುಕ ಶಿಕ್ಷಕ ಕೃಷ್ಣಮೂರ್ತಿ ನಾಯಕ್ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.