ಹೆಂಡತಿಯ ಮೇಲೆ ಸಂಶಯಪಟ್ಟು ಅಪ್ರಾಪ್ತ ಬಾಲಕಿಯನ್ನು ಮದುವೆಯಾದ 3 ಮಕ್ಕಳ ತಂದೆ
ಬೆಳಗಾವಿ -ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ದೇವಸ್ಥಾನವೊಂದರಲ್ಲಿ ಹೆಂಡತಿಯ ಮೇಲೆ ಸಂಶಯಪಟ್ಟು ಅಪ್ರಾಪ್ತ ಬಾಲಕಿಯನ್ನು ಮದುವೆಯಾದ ಘಟನೆ ನಡೆದಿದೆ.
ಹುಬ್ಬಳ್ಳಿಯ ಮಹದೇವ ನಗರ ನಿವಾಸಿಯಾಗಿರುವ ಹನಮಂತ ಉಪ್ಪಾರ ವಿರುದ್ಧ ಮೊದಲ ಪತ್ನಿ ನೇತ್ರಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಹನಮಂತ ಉಪ್ಪಾರ ಹಣದಾಸೆ ತೋರಿಸಿ 17 ವರ್ಷದ ಬಾಲಕಿಯನ್ನು ಮದುವೆಯಾಗಿದ್ದಾನೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಇಡಕಲ್ ಪಡೆಪ್ಪನ ದೇವಸ್ಥಾನದಲ್ಲಿ ಈ ಮದುವೆ ನಡೆದಿದೆ. ಇದನ್ನು ವಿರೋಧಿಸಿ ನೇತ್ರಾ ಹುಬ್ಬಳ್ಳಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇನ್ನು 17 ವರ್ಷದ ಬಾಲಕಿ ಮದುವೆಯಾದ ಹಿನ್ನಲೆ ಶಿಶು ಅಭಿವೃದ್ಧಿ ಅಧಿಕಾರಿಗಳು ಹುಬ್ಬಳ್ಳಿಯ ಅಶೋಕ ನಗರದಲ್ಲಿ ಹನಮಂತ ಉಪ್ಪಾರ ವಿರುದ್ದ ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ. ಅಪ್ರಾಪ್ತ ಬಾಲಕಿ ಮದುವೆಯಾದ ಹಿನ್ನಲೆ ಎರಡು ದೂರು ದಾಖಲಾಗುತ್ತಲೇ ಮೂರು ಮಕ್ಕಳ ತಂದೆ ಅಂಕಲ್ ನಾಪತ್ತೆಯಾಗಿದ್ದಾನೆ.