ಭಟ್ಕಳದ ಒಂದೇ ಕಟುಂಬದ ನಾಲ್ವರ ಮರ್ಡರ್ ಕೇಸ ನ ಪ್ರಮುಖ ಆರೋಪಿ ಬ್ರಾಹ್ಮಣ ಯುವಕ ವಿನಯ ಭಟ್ ಬಂಧನ
ಭಟ್ಕಳ- ಹಾಡುಹಗಲೇ ಕತ್ತಿಯಿಂದ ಕಡಿದು ಒಂದೇ ಕುಟುಂಬದ ನಾಲ್ವರನ್ನು ಹತ್ಯೆಗೈದಿರುವ ಪ್ರಮುಖ ಆರೋಪಿ ವಿನಯ ಭಟ್ ಅನ್ನು ಭಟ್ಕಳದ ಪೊಲೀಸರು ರವಿವಾರ ಶಿವಮೊಗ್ಗದಲ್ಲಿ ಬಂಧಿಸಿದ್ದಾರೆ. ಆರೋಪಿಗಳು ಶಿವಮೊಗ್ಗದ ಬಳಿ ದೇವಸ್ಥಾನ ಒಂದರಲ್ಲಿ ಅಡಗಿ ಕುಳಿತುಕೊಂಡಿದ್ದರು ಎನ್ನುವ ಮಾಹಿತಿ ಇತ್ತು .ಶುಕ್ರವಾರ ಭಟ್ಕಳ ತಾಲೂಕಿನ ಹಾಡುವಳ್ಳಿ ಗ್ರಾಮದ ಸಮೀಪ ಶಂಭು ಭಟ್(65), ಅವರ ಪತ್ನಿ ಮಾದೇವಿ ಭಟ್(40), ಮಗ ರಾಜೀವ್ ಭಟ್(34) ಹಾಗೂ ಸೊಸೆ ಕುಸುಮಾ ಭಟ್(30) ಅವರನ್ನು ಕತ್ತಿಯಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಆಸ್ತಿ ವಿಚಾರಕ್ಕೆ ಸಂಬಂಧಿಯಿಂದಲೆ ಹತ್ಯೆ ನಡೆದಿರಬಹುದು ಶಂಕೆ ವ್ಯಕ್ತವಾಗಿತ್ತು. ಕೊಲೆಯಾದ ದೇಹಗಳು ಛಿದ್ರ ಛಿದ್ರವಾಗಿದೆ ನೋಡುವುದರಲ್ಲಿ ಭಯ ಹುಟ್ಟಿಸುವಂತಿತ್ತು. ಪೋಲಿಸರ ತನಿಖಾ ತಂಡ ಅಜ್ಞಾತ ಸ್ಥಳದಲ್ಲಿ ಪ್ರಮುಖ ಅರೋಪಿ ವಿನಯ ಭಟ್ಟ ನನ್ನು ವಿಚಾರಣೆ ನಡೆಸುತ್ತಿದೆ. ಸೋಮವಾರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರಿಪಡಿಸುವ ಸಾಧ್ಯತೆಗಳಿವೆ.