ಆಗಸ್ಟ್ 1 ರಂದು ಬೆಳಿಗ್ಗೆ 10 ಗಂಟೆಗೆ
ಲಿಂಗನಮಕ್ಕಿ ಜಲಾಶಯದಿಂದ ನದಿಗೆ ನೀರು ಹರಿಸಲಾಗುತ್ತಿದೆ-ನದಿಪಾತ್ರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ಹೋಗಲು ಅಧಿಕಾರಿಗಳಿಂದ ಅಂತಿಮ ಅಲರ್ಟ್
ಹೊನ್ನಾವರ-ಲಿಂಗನಮಕ್ಕಿ ಜಲಾಶಯ 1812.65 ಕ್ಯೂಸೆಕ್ ನೀರು ಹರಿದು ಬರುತ್ತಿರುವ ಬೆನ್ನಲ್ಲೇ ನದಿಯ ಪಾತ್ರದ ಜನರಿಗೆ ಅಲರ್ಟ್ ಮಾಡಲಾಗಿದೆ.
ಇದರ ಬೆನ್ನಲ್ಲೇ ನಾಳೆ ಆ.01 ರಂದು ನದಿಗೆ ನೀರು ಹರಿಸಲಾಗುತ್ತಿದೆ. ಬೆಳಿಗ್ಗೆ 10 ಗಂಟೆಗೆ ಜಲಾಶಯದಿಙದ ನದಿಗೆ ನೀರು ಹರಿಸಲಾಗುತ್ತಿದೆ.
ಲಿಂಗನಮಕ್ಕಿ ಜಲಾಶಯಕ್ಕೆ 82 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿರುವುದರಿಂದ ಜಲಾಶಯ 1819 ಅಡಿ ಗರಿಷ್ಠ ಮಟ್ಟವನ್ನ ವೇಗವಾಗಿ ತುಲುಪುವುದರಿಂದ ನಾಳೆ 10 ಗಂಟೆಗೆ ನದಿಗೆ ನೀರು ಹರಿಸಲಾಗುತ್ತಿದೆ.
ನದಿಪಾತ್ರದ ಜನ ತಮ್ಮಜಾನುವಾರುಗಳನ್ನ ಸುರಕ್ಷಿತ ಸ್ಥಳಕ್ಕೆ ಜಾನುವಾರುಗಳನ್ನ ಕರೆದು ಕರೆದುಕೊಂಡು ಹೋಗಲು ಅಙತಿಮ ಅಲರ್ಟ್ ಸಹ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ನೀಡಿದೆ.