ಪತ್ನಿಯನ್ನು ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿದ ಪತಿರಾಯ
ನೆಲಮಂಗಲ: ಮಹಿಳೆಯನ್ನು ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿದ ಘಟನೆ ನೆಲಮಂಗಲ ಭೂಸಂದ್ರ ಗ್ರಾಮದಲ್ಲಿ
ನಡೆದಿದೆ.
ಶ್ರುತಿ (29)ಯನ್ನು ಕೊಲೆಯಾದ ಮಹಿಳೆ. ಈಕೆಯನ್ನು ಪತಿಯೇ ಮಾರಕಾಸ್ತ್ರದಿಂದ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಬೆಸ್ಕಾಂ ಉದ್ಯೋಗಿಯಾಗಿರುವ ಕೃಷ್ಣಮೂರ್ತಿ ಕೊಲೆ ಮಾಡಿದ್ದು, ಇದೀಗ ಪರಾರಿಯಾಗಿದ್ದಾನೆ.
ಕೃಷ್ಣಮೂರ್ತಿ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ನಿನ್ನೆಯೂ ಪತಿಯ ಜೊತೆ ಹಣಕಾಸಿನ ವಿಚಾರಕ್ಕೆ ಜಗಳವಾಡಿ ಹೆಂಡತಿಗೆ ಮಾರಕಾಸ್ತ್ರಗಳಿಂದ ಹೊಡೆದಿದ್ದಾನೆ.
ಬಳಿಕ ಆಕೆ ಗಂಭೀರವಾಗಿರುವುದನ್ನು ಗಮನಿಸಿ ಪರಾರಿಯಾಗಿದ್ದಾನೆ.
ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.