ಉತ್ತರ ಕನ್ನಡ, ಶಿವಮೊಗ್ಗ ಮತ್ತು ಹಾವೇರಿ ಈ ಮೂರು ಜಿಲ್ಲೆಗಳ 18 ಕಡೆಗಳಲ್ಲಿ ದೇವಸ್ಥಾನ, ಮನೆಗಳನ್ನು ಕಳ್ಳತನ ಹಾವೇರಿ ಪ್ರಾಥಮಿಕ ಶಾಲೆ ಶಿಕ್ಷಕ , ಖತರ್ನಾಕ್ ಕಳ್ಳ ವಸಂತ ಬಂಧನ
ಯಲ್ಲಾಪುರ – ಉತ್ತರ ಕನ್ನಡ, ಶಿವಮೊಗ್ಗ ಮತ್ತು ಹಾವೇರಿ ಈ ಮೂರು ಜಿಲ್ಲೆಗಳ 18 ಕಡೆಗಳಲ್ಲಿ ದೇವಸ್ಥಾನ, ಮನೆಗಳನ್ನು ಕಳ್ಳತನ ಮಾಡಿದ ಆರೋಪಿಗಳನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಲಿಂಗದೇವರಕೊಪ್ಪ ಪ್ರಾಥಮಿಕ ಶಾಲೆಯ ಶಿಕ್ಷಕ ವಸಂತ ಶಿವಪ್ಪ ತಂಬಾಕದ(40), ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಗುಡ್ಡದ ಬೇವಿನಹಳ್ಳಿ ನಿವಾಸಿ ಹಮಾಲಿ ವೃತ್ತಿಯ ಸಲೀಂ ಜಮಾಲಸಾಬ್ ಕಮ್ಮಾರ್ (28), ಬಂಧಿತ ಆರೋಪಿಗಳಾಗಿದ್ದಾರೆ, ಇವರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಅಂಕೋಲಾ ಶಿರಸಿ, ಗ್ರಾಮೀಣ ಭಾಗ ಬನವಾಸಿ ಕಡೆಗಳಲ್ಲಿ ಹಾಗೂ ಶಿವಮೊಗ್ಗ ಜಿಲ್ಲೆಯ ರಿಪ್ಪನಪೇಟೆ, ಹೊಸನಗರ, ಹಾವೇರಿ ಜಿಲ್ಲೆಯ ಹಂಸನಬಾವಿ, ಹಿರೇಕೆರೂರು, ಹಾವೇರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಗಾರ ಮತ್ತು ಬೆಳ್ಳಿಯ ವಸ್ತುಗಳು, ಕಾಣಿಕೆಹುಂಡಿ, ದೇವಸ್ಥಾನದ ಗಂಟೆಗಳು ಹಿತ್ತಾಳೆ ಮತ್ತು ತಾಮ್ರದ ಪೂಜಾ ಸಾಮಗ್ರಿಗಳನ್ನು ಹಾಗೂ ಸಿಸಿಟಿವಿಯ ಡಿವಿಆರ್ ಗಳನ್ನು ಕಳ್ಳತನ ಮಾಡಿದ್ದರು.
2022 ಜನವರಿ 18 ರಂದು ಯಲ್ಲಾಪುರ ತಾಲೂಕಿನ ಮಂಚಿಕೇರಿ ಗ್ರಾಮದ ಮಹಾಗಜಲಕ್ಷ್ಮಿ ದೇವಸ್ಥಾನದ ಬಾಗಿಲ ಬೀಗವನ್ನು ಮುರಿದು ದೇವಸ್ಥಾನದ ಕಾಣಿಕೆ ಹುಂಡಿಯನ್ನು ಒಡೆದು ಅದರಲ್ಲಿಯ ಸುಮಾರು 3,000 ರೂಪಾಯಿ ಕಾಣಿಕೆ ಹಣ ಹಾಗೂ ಸುಮಾರು 10 ಸಾವಿರ ರೂಪಾಯಿ ಬೆಲೆ ಬಾಳುವ ದೊಡ್ಡದಾದ ಎರಡು ಹಿತ್ತಾಳೆಯ ಗಂಟೆಗಳು, ಸುಮಾರು 20 ಸಾವಿರ ರೂಪಾಯಿ ಬೆಲೆಬಾಳುವ ಒಂದು ತಾಮ್ರದ ಕಡಾಯಿ,10 ಸಾವಿರ ರೂಪಾಯಿ ಬೆಲೆ ಬಾಳುವ ಸಿಸಿಟಿವಿ ಡಿವಿಆರ್ ಕಳ್ಳತನ ಮಾಡಿಕೊಂಡು ಹೋಗಿದ್ದರು. 18 ನವಂಬರ್ 2022 ರಂದು ರಾತ್ರಿ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಗ್ರಾಮದ ಶಿವವ್ಯಾಗ್ರೇಶ್ವರ ದೇವಸ್ಥಾನದ ಬಾಗಿಲು ಮುರಿದು ದೇವಸ್ಥಾನದಲ್ಲಿದ್ದ ಸುಮಾರು 13,500 ರೂ ಬೆಲೆಯ ಪೂಜಾ ಸಾಮಗ್ರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಕುರಿತು ಮಂಚಿಕೇರಿಯ ಮಹಾಗಜಲಕ್ಷ್ಮಿ ದೇವಸ್ಥಾನ ಸಮಿತಿ ಹಾಗೂ ಗುಳ್ಳಾಪುರದ ಶಿವವ್ಯಾಗ್ರೇಶ್ವರ ದೇವಸ್ಥಾನದವರು ಯಲ್ಲಾಪುರ ಪೊಲೀಸ್ ಠಾಣೆಗೆ ಕಳ್ಳತನ ಆಗಿರುವ ಕುರಿತು ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪೋಲಿಸ್ ಅಧೀಕ್ಷಕರಾದ ವಿಷ್ಣುವರ್ಧನ್ ಎನ್ ಆದೇಶದಂತೆ, ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಸಿ ಟಿ ಜಯಕುಮಾರ, ಶಿರಸಿ ಪೊಲೀಸ್ ಉಪಾಧ್ಯೀಕ್ಷಕರಾದ ರವಿ ನಾಯ್ಕ ಮಾರ್ಗದರ್ಶನದಲ್ಲಿ ಪಿ.ಐ ಸುರೇಶ ಯಳ್ಳುರು ನೇತೃತ್ವದಲ್ಲಿ, ಪಿಎಸ್ಐಗಳಾದ ಮಂಜುನಾಥ ಗೌಡರ್, ಅಮೀನಸಾಬ ಅತ್ತಾರ್, ಶ್ಯಾಮ ಪಾವಸ್ಕರ್, ಪ್ರೊಫೆಷನರಿ ಪಿಎಸ್ಐ ಉದಯ, ಹಾಗೂ ಸಿಬ್ಬಂದಿಗಳಾದ ದೀಪಕ ನಾಯ್ಕ, ಬಸವರಾಜ ಹಗರಿ, ಮೊಹಮ್ಮದ್ ಶಫಿ, ಗಜಾನನ ನಾಯ್ಕ, ಪರಶುರಾಮ ಕಾಳೇ, ಪ್ರವೀಣ ಪೂಜಾರ, ಗಿರೀಶ, ನಂದೀಶ, ಮಹಿಳಾ ಸಿಬ್ಬಂದಿಗಳಾದ ಶೋಭಾ ನಾಯ್ಕ, ಸಿಡಿಆರ್ ಸೆಲ್ ನ ಉದಯ, ರಮೇಶ ಹಾಗೂ ಹಾವೇರಿ ಜಿಲ್ಲೆಯ ಹಂಸನಬಾವಿ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿ ಮನೋಹರ ಇವರು ಆರೋಪಿತರನ್ನು ದಸ್ತಗಿರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು