ಪ್ರಿಯತಮನಿಗಾಗಿ ಗಂಡನಿಗೆ ವಿಚ್ಚೇದನ ನೀಡಿದ ಮಹಿಳೆ- ಮಹಿಳೆಯ ಬರ್ಬರ ಕೊಲೆ
ಹಾಸನ-ವಿಚ್ಛೇದಿತ ಯುವತಿಯನ್ನು ಅಕೆಯ ಪ್ರಿಯಕರ ಕೊಲೆ ಮಾಡಿ ಕಬ್ಬಿಣ ಗದ್ದೆಯಲ್ಲಿ ಹೂತಿಟ್ಟ ಆರೋಪ ಕೇಳಿ ಬಂದಿದೆ.
ಹೊಳೆನರಸೀಪುರ ತಾಲೂಕಿನ ಪಾರಸನಹಳ್ಳಿಯಲ್ಲಿ ಪ ಕಾವ್ಯಾ(22) ಅಕ್ಷಯ್ ಎಂಬಾತನನ್ನು ಪ್ರೀತಿಸಿ ಮದುವೆ ಆಗಿದ್ದಳು. ಕಾಲ ಕಳೆದಂತೆ ಸಂಸಾರದಲ್ಲಿ ಹೊಂದಾಣಿಕೆ ಬಾರದ ಕಾರಣ ಗಂಡನಿಂದ ವಿಚ್ಚೇದನ ಪಡೆದಿದ್ದಳು.
ಬಳಿಕ ಆಕೆಗೆ ಅವಿನಾಶ್ ಎಂಬಾತನೊಂದಿಗೆ ಪ್ರೇಮಾಂಕುರವಾಗಿತ್ತು.ಮದುವೆ ಆಗುವುದಾಗಿ ಹೇಳಿದ್ದ ಅವಿನಾಶ್ ಜತೆಗೆ ಕಾವ್ಯಾ ವಾಸವಾಗಿದ್ದ. ಆದರೆ ಕಳೆದ ಕೆಲವು ದಿನಗಳ ಹಿಂದೆ ಇದ್ದಕ್ಕಿದ್ದಂತೆ ಕಾವ್ಯಾ ನಾಪತ್ತೆಯಾಗಿದ್ದಳು.
ಈ ಸಂಬಂಧ ಕಾವ್ಯಾ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.ಈ ಕುರಿತು ತನಿಖೆಗಿಳಿದ ಪೊಲೀಸರಿಗೆ ಕಾವ್ಯಾ ಕೊಲೆಯಾಗಿರುವುದನ್ನು ಪತ್ತೆಹಚ್ಚಿದ್ದಾರೆ.
ಕಬ್ಬಿನ ಗದ್ದೆಯಲ್ಲಿ ಹೂತಿಟ್ಟಿದ ಕಾವ್ಯಾಳ ಶವವನ್ನು ಹೊರಗೆ ತೆಗೆಯಲಾಗಿದೆ.ವಾರದ ಹಿಂದೆ ಕೊಲೆ ನಡೆದಿರುವ ಶಂಖೆ ವ್ಯಕ್ತವಾಗಿದೆ.
ಇದೀಗ ಹೊಳೆನರಸೀಪುರ ಪೊಲೀಸರು ಅವಿನಾಶ್ನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.