ಮದುವೆ ವಿಚಾರವಾಗಿ ಯುವತಿಯೋರ್ವಳನ್ನು ಹಾಡು ಹಗಲೇ ಬರ್ಬರವಾಗಿ ಕೊಚ್ಚಿ ಕೊಲೆ
ಮಾಡಿದ ದುಷ್ಕರ್ಮಿಗಳು
ಕಡಬ-ಮದುವೆ ವಿಚಾರವಾಗಿ ಯುವತಿಯೋರ್ವಳನ್ನು ಹಾಡು ಹಗಲೇ ಅತ್ಯಂತ ಭೀಕರವಾಗಿ ಕೊಲೆ ಮಾಡಿ ಪರಾರಿಯಾದ ಘಟನೆ ದಾವರೆಗೆ ಚರ್ಚ್ ರಸ್ತೆಯಲ್ಲಿ ನಡೆದಿದೆ .
ವಿನೋಬ ನಗರದ ಚಾಂದ್ ಸುಲ್ತಾನ್ (24) ಕೊಲೆಯಾದ ಯುವತಿ .ಪಿಜೆ ಬಡಾವಣೆಯ ಚರ್ಚ್ ರಸ್ತೆಯಲ್ಲಿ ಬಳಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಯುವತಿಯನ್ನು ಬೆಳಗ್ಗೆ 11.30ಕ್ಕೆ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.
ಯುವತಿಗೆ 8 ತಿಂಗಳ ಹಿಂದೆ ಹರಿಹರ ಮೂಲದ ಯುವಕನೊಂದಿಗೆ ನಿಶ್ಚಿತಾರ್ಥವಾಗಿತ್ತು. ವಿವಾಹಕ್ಕೆ ವಿರೋಧಿಸಿ ಹತ್ಯೆ ಮಾಡಲಾಗಿದೆ ಎಂದು ಶಂಕೆ ವ್ಯಕ್ತವಾಗಿದೆ. ಯುವತಿಯ ಕೊಲೆ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದೆ.
ಯುವತಿ ಸ್ಕೂಟರ್ ನಲ್ಲಿ ಬಂದು ವಾಹನ ನಿಲ್ಲಿಸಿ ಕೊಲೆ ಮಾಡಿದ ವ್ಯಕ್ತಿಯ ಜೊತೆಗೆ ಮಾತನಾಡುತ್ತಿದ್ದಂತೆ ಏಕಾಎಕಿ ಚಾಕುವಿನಿಂದ ಯುವತಿಯ ಕುತ್ತಿಗೆಗೆ ಹಲವಾರು ಬಾರಿ ಇರಿದ ಯುವಕ ನಾಪತ್ತೆ ಯಾಗಿದ್ದಾನೆ. ಕೆಲವರು ಹಲ್ಲೆ ನಡೆಸುತ್ತಿದ್ದನ್ನ ನೋಡುತ್ತಿದ್ದರೂ ಯುವಕ ಬೈಕ್ ನಲ್ಲಿ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.