ಬಂಟ್ವಾಳ: ಕುಮ್ದೇಲ್ ನಲ್ಲಿ ಗರಿಗೆದರಿದ ಗ್ಯಾಂಗ್ ವಾರ್.!ಯುವಕನಿಗೆ ಮಾರಣಾಂತಿಕ ಹಲ್ಲೆ…
ಬಂಟ್ವಾಳ: ವ್ಯಕ್ತಿಯೊಬ್ಬರಿಗೆ ಪರಿಚಿತ ಗ್ಯಾಂಗ್ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬಂಟ್ವಾಳದ ಕುಂಡೇಲುನಲ್ಲಿ ನಡೆದಿದೆ.
ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು, ನಿತೇಶ್ ಮಡಿವಾಳ ಎಂಬವರಿಗೆ ಲೋಕೇಶ್, ರೋಷನ್, ಸುಜಿತ್, ಸುಮಂತ್ ಎಂಬವರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು ವೆನ್ ಲಾಕ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹಲ್ಲೆ ನಡೆಸಿದ ವ್ಯಕ್ತಿಗಳು ಹಲ್ಲೆಗೊಳಗಾದ ನಿತೇಶ್ ಮಡಿವಾಳ ಅವರಿಗೆ ಪರಿಚತರಾಗಿದ್ದು , ಏಕಾಏಕಿ ನಿತೀಶ್ ಅವರನ್ನು ಬರಲು ಹೇಳಿ, ಕ್ಷುಲ್ಲಶ ಕಾರಣಕ್ಕಾಗಿ ಹಲ್ಲೆ ನಡೆಸಿದ್ದಾರೆ… ಯಾಕಾಗಿ ಈ ರೀತಿ ಹಲ್ಲೆ ನಡೆಸಿದ್ದಾರೆ ಎಂದು ನಿತೀಶ್ ಮಡಿವಾಳ ಅವರಿಗೂ ಕೂಡ ತಿಳಿದಿಲ್ಲ….