ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಗಂಡನನ್ನು
ಪ್ರಿಯಕರನ ಜತೆ ಸೇರಿ ಮರ್ಡರ್ ಮಾಡಿದ ಹೆಂಡತಿ
ಮೈಸೂರು- ಪ್ರಿಯಕರನ ಜತೆ ಸೇರಿ ಪತ್ನಿ ಪತಿಯನ್ನೇ ಕೊಲೆ ಮಾಡಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ. ಅನೈತಿಕ ಸಂಬಂಧಕ್ಕೆ ಪತಿ ಕಿರಿಕ್ ಮಾಡಿರುವುದಕ್ಕೆ ಈ ಕೃತ್ಯ ನಡೆದಿಡ್.ರಾತ್ರೋರಾತ್ರಿ ಪ್ರಿಯಕರನ ಜತೆ ಸೇರಿ ಮಾಯಾಂಗನೆ ಪತ್ನಿ ಗಂಡನನ್ನು ಮರ್ಡರ್ ಮಾಡಿದ್ದಾಳೆ. ಮೈಸೂರಿನ ಹೂಟಗಳ್ಳಿ ನಿವಾಸಿ ಮಂಜು ಕೊಲೆಯಾದ ದುರ್ದೈವಿಯಾಗಿದ್ದಾನೆ.
ಮೈಸೂರಿನ ಬೋಗಾದಿ ನಿವಾಸಿ ಲಿಖಿತಾ ಜೊತೆ 12 ವರ್ಷಗಳ ಹಿಂದೆ ಮಂಜು ಮದುವೆ ಯಾಗಿದ್ದಳು. ಇವರ ದಾಂಪತ್ಯಕ್ಕೆ ಇಬ್ಬರು ಮಕ್ಕಳು ಸಾಕ್ಷಿಯಾಗಿದ್ದಾರೆ. ಈ ಹಿಂದೆ ಪ್ರಿಯಕರನ ಜೊತೆ ಲಿಖಿತಾ ಓಡಿ ಹೋಗಿದ್ದಳು. ಆದರೆ ರಾಜಿ ಪಂಚಾಯ್ತಿ ಮೂಲಕ ಮತ್ತೆ ಪತಿ ಮನೆ ಸೇರಿಸಿಕೊಂಡಿದ್ದಳು.
ಈ ವೇಳೆ ಪತ್ನಿ ನಡವಳಿಕೆ ಬಗ್ಗೆ ಪತಿ ಹಾಗಾಗ್ಗೆ ಪ್ರಶ್ನೆ ಮಾಡುತ್ತಿದ್ದನು. ಈ ಕಾರಣ ತಡರಾತ್ರಿ ಪ್ರಿಯಕರನ ಜೊತೆ ಸೇರಿ ಲಿಖಿತಾ ಪತಿ ಮಂಜುವನ್ನು ಉಸಿರುಗಟ್ಟಿಸಿ ಕೊಲೆಗೈದ್ದಾಳೆ. ಈಗ ಮೈಸೂರಿನ ವಿಜಯನಗರ ಪೋಲೀಸರು ಪತ್ನಿ ಲಿಖಿತಾಳನ್ನು ವಶಕ್ಕೆ ಪಡೆದಿದ್ದಾರೆ.