ದಾವಣಗೆರೆ : ನಿವೃತ್ತಿ ಜೀವನ, ಅಲ್ಲಿ ಇಲ್ಲಿ ಕುಳಿತು ಕಾಲ ಕಳೆಯುತ್ತಿದ್ದ 80 ವರ್ಷ ವಯಸ್ಸಿನ ತಾತನನ್ನು ಹನಿಟ್ರ್ಯಾಪ್ ಮಾಡಲು ಮುಂದಾಗಿದ್ದ ಮಹಿಳೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕೈ ಸಾಲ ವಾಪಸ್ ಕೇಳಿದಕ್ಕೆ ಮಹಿಳೆ ತಾತನಿಗೆ ಹನಿಟ್ರ್ಯಾಪ್ಗೆ ಕೆಡವಿದ ಘಟನೆ ದಾವಣಗೆರೆ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರಾಮಾಗಿ ಜೀವನ ನಡೆಸುತ್ತಿದ್ದ ತಾತನಿಗೆ 32 ವರ್ಷದ ವಿವಾಹಿತೆಯ ಪರಿಚಯವಾಗಿತ್ತು. ಬನ್ನಿ ಟೀ ಕುಡಿಯಲು ಅಂತಾ ಮನೆಗೂ ಕರೆದು ಸಲುಗೆಯಿಂದ ಸ್ನೇಹವಾಗಿತ್ತು. ಸ್ನೇಹದ ನಂಬಿಕೆಯಲ್ಲೇ ಮಹಿಳೆ ಸಾಲ ಕೇಳಿದಾಗ ಅಜ್ಜ ದಾರಾಳವಾಗಿ ಸಾಲಾ ಕೊಟ್ಟಿದ್ದಾರೆ. ಕೊಟ್ಟ ಹಣ ಕೇಳಲು ಹೋದಾಗ ಹನಿಟ್ರ್ಯಾಪ್ ಮಾಡಿ 15 ಲಕ್ಷಕ್ಕೆ ಬೇಡಿಕೆ ಇಟ್ಟು ಮಹಿಳೆ ಈಗ ಪೊಲೀಸರ ಅತಿಥಿ ಆಗಿದ್ದಾಳೆ.
ದಾವಣಗೆರೆ ನಗರದ ಶಿವಕುಮಾರ ಸ್ವಾಮಿ ಬಡಾವಣೆ ನಿವಾಸಿ ಚಿದಾನಂದಪ್ಪ ಎಂಬುವರು ಹನಿಟ್ರ್ಯಾಪ್ ಗೆ ಒಳಗಾಗಿ ನರಳಾಡಿದ 79ರ ವೃದ್ಧ. ಶಿವಕುಮಾರ ಸ್ವಾಮೀ ಬಡಾವಣೆ ಹೊಂದಿಕೊಂಡ ಸರಸ್ವತಿ ನಗರದ ನಿವಾಸಿ 32 ವರ್ಷದ ಯಶೋಧ ಎಂಬ ಮಹಿಳೆಯ ಜೊತೆಗೆ ಪರಿಚಯವಾಗಿದೆ. ಹೀಗೆ ಪರಿಚಯವಾಗಿ ಇಬ್ಬರ ನಡುವೆ ಸ್ನೇಹ ಶುರುವಾಗಿದೆ. ಯಶೋಧಾ ಅವರು ಚಿದಾನಂದಪ್ಪನನ್ನ ಮನೆಗೆ ಆಹ್ವಾನಿಸುವುದು ಟೀ, ಕಾಫಿ ಜ್ಯೂಸ್ ಕುಡಿಸುವುದು ನಡೆದಿದೆ. ಇದೇ ವೇಳೆ ಯಶೋಧಾ ಚಿದಾನಂದಪ್ಪನ ಬಳಿ ಆಗ ಐದು ಈಗ ಹತ್ತು ಅಂತಾ ಬರೋಬರಿ 86 ಸಾವಿರ ರೂಪಾಯಿ ಸಾಲ ಪಡೆದಿದ್ದಾಳೆ. ನಿವೃತ್ತಿ ಜೀವನ, ಹಣಕ್ಕೆ ಬೇಡಿಕೆ ಜಾಸ್ತಿಯಾದ ಪರಿಣಾಮ ಹಣ ವಾಪಸ್ಸು ಕೊಡುವಂತೆ ಚಿದಾನಂದಪ್ಪ ಕೇಳಿದ್ದಾರೆ. ಆಗ ಈಗ ಅಂತಾ ಹಣ ವಾಪಸ್ಸು ಕೊಟ್ಟಿಲ್ಲ. ಒಂದು ದಿನ ವಾಕಿಂಗ್ ಮುಗಿಸಿ ಯಶೋಧಾ ಮನೆಯ ಮುಂದೆ ಹಾಯ್ದು ಚಿದಾನಂದಪ್ಪ ಹೋಗುವಾಗ ಯಶೋಧಾ ಚಿದಾನಂದಪ್ಪನ್ನ ಅಕ್ಕರೆಯಿಂದ ಕರೆದಿದ್ದಾಳೆ. ಜ್ಯೂಸ್ ಕೊಟ್ಟಿದ್ದಾಳೆ. ಕುಡಿದ ಕೆಲ ಹೊತ್ತಿನಲ್ಲಿಯೇ ಚಿದಾನಂದಪ್ಪನ ಪ್ರಜ್ಞೆ ತಪ್ಪಿದೆ. ಎಚ್ಚರಾದ ಮೇಲೆ ಚಿದಾನಂದಪ್ಪನವರ ಮೇಲೆ ಬಟ್ಟೆ ಇರಲಿಲ್ಲ. ಭಯಗೊಂಡು ಬಟ್ಟೆ ಹಾಕಿಕೊಂಡು ಮನೆಗೆ ಬಂದಿದ್ದಾರೆ.
ಇದಾದ ಎರಡು ದಿನಕ್ಕೆ ಮಹಿಳೆ ಹಣಕ್ಕಾಗಿ ಮತ್ತೆ ಚಿದಾನಂದಪ್ಪನವರಿಗೆ ಫೋನ್ ಮಾಡಿದ್ದಾನೆ. ಆಗ ನೀ ನನ್ನ ಜೊತೆ ಮಲಗಿರುವೆ. ನನ್ನ ಬಳಿ ವಿಡಿಯೋ ಇದೆ. 15 ಲಕ್ಷ ಕೊಡು ಇಲ್ಲಾ ನಿನ್ನ ಹೆಂಡತಿ ಮಕ್ಕಳಿಗೆ ತೊರಿಸುವೆ ಎಂದಿದ್ದಾಳೆ. ಹೆದರಿ ಈ ವಿಚಾರವನ್ನು ಚಿದಾನಂದಪ್ಪ ತಮ್ಮ ಪರಿಚಯದವರಿಗೆ ಹೇಳಿದ್ದಾರೆ. ಅವರು ಏಳರಿಂದ ಎಂಟು ಲಕ್ಷಕ್ಕೆ ಮಾತಾಡಿ ಮುಗಿಸಲು ಮುಂದಾಗಿದ್ದಾರೆ. ಆದ್ರೆ ಮಹಿಳೆ ಮಾತ್ರ 15 ಲಕ್ಷ ಬೇಕೆ ಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಇದೇ ವೇಳೆ ಚಿದಾನಂದಪ್ಪನ ವಾಟ್ಸಪ್ ಗೆ ಒಂದು ನಗ್ನ ಫೋಟೋ ಕಳಿಸಿ ಬೆದರಿಸಿದ್ದಾಳೆ. ಇದಕ್ಕೆ ಹೆದರಿದ ವೃದ್ಧ ಈ ವಿಚಾರವನ್ನು ತನ್ನ ಪುತ್ರನಿಗೆ ಹೇಳಿದ್ದಾರೆ. ಆಗ ಈ ವಿಚಾರ ಪೊಲೀಸರ ಗಮನಕ್ಕೆ ಬಂದಿದೆ. ಕೆಟಿಜೆನಗರ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡು ಯಶೋಧಾಳನ್ನ ವಶಕ್ಕೆ ಪಡೆದಿದ್ದಾರೆ. ಅಜ್ಜನಿಗೆ ಹನಿಟ್ರ್ಯಾಪ್ ಮಾಡಿ 15 ಲಕ್ಷ ವಸೂಲಿಗೆ ಮುಂದಾದ ಯಶೋಧ ಪೊಲೀಸರ ಅತಿಥಿ ಆಗಿದ್ದಾಳೆ.