ಐವರು ಶಂಕಿತ ಉಗ್ರರ ಖಾತೆಗೆ ವಿದೇಶದಿಂದ ಸುಮಾರು 15 ಲಕ್ಷ ರೂಪಾಯಿ ಹಣ
ಬೆಂಗಳೂರು-ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ರಾಜ್ಯ ವಿವಿಧ ನಗರಗಳಲ್ಲಿ ಬಾಂಬ್ ಸ್ಪೋಟಿಸಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರಿಗೆ ವಿದೇಶದಿಂದ ಸುಮಾರು 15 ಲಕ್ಷ ರೂ. ಬಂದಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಪುರಾವೆ ಸಹಿತ ಮಾಹಿತಿ ಲಭಿಸಿದೆ.
ದುಬೈ ಮತ್ತು ಇತರೆ ದೇಶಗಳಲ್ಲಿರುವ ವಿದೇಶಿಯರು ಪ್ರಕರಣದ ಪ್ರಮುಖ ಆರೋಪಿ ಜುನೇದ್ ಅಹಮ್ಮದ್ ಮೂಲಕ ಶಂಕಿತರ ಖಾತೆಗಳಿಗೆ ಹಣ ಜಮೆ ಮಾಡಿದ್ದಾರೆ. ಶಂಕಿತ ಉಗ್ರರಾದ ಸೈಯದ್, ಜಾಹೀದ್, ಸೈಯದ್ ಮುದಾಸೀರ್, ಫೈಜಲ್ ಹಾಗೂ ಮೊಹಮ್ಮದ್ ಉಮರ್ ಖಾತೆಗೆ ಹಣ ಬಂದಿರುವುದಕ್ಕೆ ದಾಖಲೆಗಳು ಲಭಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.