ಬೈಕ್ ನ್ನು ಅಡ್ಡ ಹಾಕಿ ಚೂರಿಯಿಂದ ಇರಿದು ಯುವಕನ ಕೊಲೆ
ಮೈಸೂರು:ಬೈಕ್ ನಲ್ಲಿ ತೆರಳುತ್ತಿದ್ದ ಯುವಕನಿಗೆ ಚೂರಿಯುಂದ ಇರಿದು ಕೊಲೆ ಮಾಡಿರುವ ಘಟನೆ ಮೈಸೂರು ಮೆಲ್ಲಹಳ್ಳಿಯಲ್ಲಿ ನಡೆದಿದೆ.
ಮನೋಜ್ಗೆ(24) ಕೊಲೆಯಾದ ಯುವಕ. ಪರಿಚಯಸ್ಥರೇ ಆದ ರಘು, ಸಚಿನ್,ಕಿರಣ್ ,ಶಂಕರ್ ಎಂಬವರು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಮನೋಜ್ ಮತ್ತು ಆರೋಪಿಗಳ ನಡುವೆ ಸಣ್ಣ, ಸಣ್ಣ ವಿಚಾರಕ್ಕೆ ಗಲಾಟೆಯಾಗುತ್ತಿತ್ತು. ಇದರ ಮುಂದುವರಿದ ಭಾಗವಾಗಿ ಮನೋಜ್ನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಮನೋಜ್ ಮನೆಗೆ ಹೋಗುತ್ತಿದ್ದ ವೇಳೆ ಬೈಕ್ ಅಡ್ಡಗಟ್ಟಿ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಈ ಕುರಿತು ವರುಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.