ಪೊಲೀಸರಿಗೆ ಚಾಲೆಂಜ್ ಹಾಕಿ ಠಾಣೆ ಪಕ್ಕದಲ್ಲೇ ಸರಗಳ್ಳತನ- ಇಬ್ಬರು ಅರೆಸ್ಟ್
ಬೆಂಗಳೂರು: ಪೊಲೀಸರಿಗೆ ಚಾಲೆಂಜ್ ಹಾಕಿ ಠಾಣೆಯ ಪಕ್ಕದ ರಸ್ತೆಯಲ್ಲೇ ಸರಗಳ್ಳತನ ಮಾಡಿರುವ ಆರೋಪಿಗಳಿಬ್ಬರನ್ನು ಇದೀಗ ಬಂಧಿಸಲಾಗಿದೆ.ಹರೀಶ್ ಹಾಗೂ ಸುರೇಶ್ನನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಇವರು ಒಂದು ವರ್ಷದಿಂದ ಗಿರಿನಗರ (Girinagar) ಹಾಗೂ ಸಿ.ಕೆ ಅಚ್ಚುಕಟ್ಟು ಸೇರಿ ಹಲವು ಠಾಣೆಗಳ ಪಕ್ಕದ ರಸ್ತೆಯಲ್ಲೇ ಸರಗಳ್ಳತನ ಮಾಡುತ್ತಿದ್ದರು. ಪ್ರತಿಯೊಂದು ತಿಂಗಳು ಒಂದೊಂದು ಠಾಣೆಯ ಪಕ್ಕದ ರಸ್ತೆಯಲ್ಲಿ ಕಳ್ಳತನ ಎಸಗುತ್ತಿದ್ದರು. ಹೀಗೆ ಮಾಡುತ್ತಾ ಒಂದು ವರ್ಷದಿಂದಲೂ ಪೊಲೀಸರಿಗೆ ಸಿಗದೆ ನಾಪತ್ತೆ ಆಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಗಿರಿನಗರ ಪೊಲೀಸರು (Girinagar Police) ಸರಗಳ್ಳರ ಬಂಧನಕ್ಕೆ ವಿಶೇಷ ತಂಡಗಳು ರಚನೆ ಮಾಡಿದ್ದರು.ಒಮ್ಮೆ ಸರಗಳ್ಳತನ ಮಾಡಿದ್ರೆ ಇಡೀ ತಿಂಗಳು ಎದಿನಂತೆ ತಮ್ಮ ಕೆಲಸ ಮಾಡುತ್ತಿದ್ದರು. ಸುರೇಶ್ ಝೋಮೋಟೋ ಬಾಯ್ ಆಗಿ ಕೆಲಸ ಮಾಡಿದ್ರೆ, ಹರೀಶ್ ವಿದ್ಯಾರ್ಥಿಯಾಗಿದ್ದ. ಒಂದು ಬಾರಿಯೂ ಬಂಧನವಾಗದೆ ಆರೋಪಿಗಳು ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದರು. ಐಷಾರಾಮಿ ಜೀವನ ನಡೆಸಲು ಆರೋಪಿಗಳು ಸರಗಳ್ಳತನ ಮಾಡ್ತಿದ್ದರು. ವೀಕ್ ಎಂಡ್ ನಲ್ಲಿ ಮೋಜು ಮಸ್ತಿ ಮಾಡಲು ಪಬ್ ಗೆ ಹೋಗ್ತಿದ್ದರು.ಸದ್ಯ ಸಿಸಿಟಿವಿ ಹಾಗೂ ಕೆಲ ಟೆಕ್ನಿಕಲ್ ಎವಿಡೆನ್ಸ್ ನಿಂದ ಆರೋಪಿಗಳನ್ನು ಬಂಧಿಸಲಾಗಿದೆ. ಗಿರಿನಗರ ಪೊಲೀಸರಿಂದ ಇಬ್ಬರು ಆರೋಪಿಗಳು ಅರೆಸ್ಟ್ ಆಗಿದ್ದಾರೆ