ಶಿರಸಿ: ಬಂಗಾರ ನೀಡುವುದಾಗಿ ನಂಬಿಸಿ ದರೋಡೆ ಮಾಡಿದ ಅಂತರ್ ಜಿಲ್ಲಾ ಆರೋಪಿಯನ್ನು ಬನವಾಸಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ತಿಮ್ಮಾಪುರದ ನಾಗಪ್ಪ ಕೊರಚರ(71),ಅವಿನಾಶ ಕೊರಚರ(28), ಆನವಟ್ಟಿಯ ನಿಸ್ಸಾರ ಅಹಮ್ಮದ ಮಹಮ್ಮದಜಾಪರ ಬಳಗಾರ(26),ಸಂಜೀವ ಕೆ.ಆರ್ ರಾಮಣ್ಣ ಕೊರಚರ(27),ಕೃಷ್ಣಪ್ಪ ಕೃಷ್ಣಮೂರ್ತಿ ನಾಯ್ಕ(42) ಬಂಧಿತ ಆರೋಪಿಗಳು.
ಆರೋಪಿಗಳು ಬಂಗಾರ ಕೊಡುವುದಾಗಿ ಹೇಳಿ ಕೇರಳ ಮೂಲದ ಬಂಗಾರದ ಕೆಲಸ ಮಾಡುವ ಸಚಿನ ಶಿವಾಜಿ ಗಾಯಕ್ವಾಡ್ ಬಳಿ 800 ಮೀ ಬಂಗಾರ ನೀಡಿದ್ದು ಆತನು ಅದನ್ನು ಊರಿಗೆ ಹೋಗಿ ಪರೀಕ್ಷಿಸಿ ಬಂಗಾರ ಎಂದು ಖಚಿತಪಡಿಸಿಕೊಂಡು ಇನ್ನಷ್ಟು ಬಂಗಾರ ಬೇಕು ಎಂದು ಆರೋಪಿತರ ಬಳಿ ಹೇಳಿದಾಗ ಶಿರಸಿ ಹಾನಗಲ್ ರಸ್ತೆಯಲ್ಲಿರುವ ಮಳಲಗಾಂ ಬಸ್ ನಿಲ್ದಾಣ ಹತ್ತಿರ ಬರಲು ತಿಳಿಸಿದ್ದಾರೆ.ಅಗಷ್ಟ್ 4ರಂದು ಬೆಳಿಗ್ಗೆ 11:45 ಸುಮಾರಿಗೆ ಆರೋಪಿತರು ತಿಳಿಸಿದ ಜಾಗಕ್ಕೆ ದೂರುದಾರರು ಬಂದಾಗ ಬಂಗಾರ ನೀಡುವುದಾಗಿ ನಂಬಿಸಿ ಕೇರಳ ಮಲಪುರಂ ನ ವಿಷ್ಣು ನಾರಾಯಣ ಇವರನ್ನು ಮಳಲಗಾಂ ಬಸ್ ನಿಲ್ದಾಣ ಒಳಗೆ ಹೋದಾಗ ಇಲ್ಲಿ ಹಣ ಲೆಕ್ಕ ಮಾಡುವುದು ಮತ್ತು ಬಂಗಾರ ಚೆಕ್ ಮಾಡುವುದು ಬೇಡ ಇಲ್ಲಿಯೇ ಇರುವ ಕಾಡಿನ ಒಳಗೆ ಹೋಗೋಣ ಎಂದು ಕರೆದುಕೊಂಡು ಹೋಗಿ ತಂದ ಹಣವನ್ನು ತೋರಿಸಲು ಹೇಳುತ್ತಾರೆ ಹಣ ತೋರಿಸಿದ ನಂತರ ಆರೋಪಿತನು ಹಣವನ್ನು ತನ್ನ ಚೀಲದಲ್ಲಿ ಇರಿಸಿಕೊಂಡು ಹಣ ಸಿಕ್ಕಿದೆ ಎಂದು ಜೋರಾಗಿ ಹಿಂದಿಯಲ್ಲಿ ಕೂಗುತ್ತಾನೆ ಆಗ ಇನ್ನುಳಿದ ಆರೋಪಿಗಳು ಬಡಿಗೆಯನ್ನು ಹಿಡಿದುಕೊಂಡು ಬಂದು 9,11,000ರೂಪಾಯಿಯನ್ನು ತೆಗೆದುಕೊಂಡು ಬಂಗಾರವನ್ನು ನೀಡದೇ ಹಲ್ಲೆ ನಡೆಸಿ ಸಚಿನ ಗಾಯಕ್ವಾಡ್ ಹಾಗೂ ವಿಷ್ಣು ನಾರಾಯಣ ಅವರ ಬಳಿ ಇದ್ದ ಹಣ ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರ ಕುರಿತು ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿತರ ಬಂಧನಕ್ಕೆ ತನಿಖಾ ತಂಡವನ್ನು ರಚಿಸಿ ಆರೋಪಿಗಳ ಹುಡುಕಾಟಕ್ಕೆ ಇಳಿದಿದ್ದರು ಘಟನೆಗೆ ಸಂಬಂಧಿಸಿದ ಒಂದು ಮೊಬೈಲ್ ಸಂಖ್ಯೆ ಸಿಕ್ಕರು ಅದು ಸ್ವಿಚ್ ಆಫ್ ಆಗಿತ್ತು ಬಳಿಕ ಈ ಕೃತ್ಯ ಮಾಡುವವರನ್ನು ಹುಡುಕುವಾಗ ಹಾನಗಲ್,ಆನವಟ್ಟಿ ಇತರ ಕಡೆಗೆ ಮೂರು ತಂಡಗಳನ್ನು ಕಳಿಸಲಾಗಿತ್ತು ಕೃತ್ಯದಲ್ಲಿ ಅಂಗವಿಕನೋರ್ವ ಇದ್ದು ಪರಿಣಾಮ ಆತನ ಹುಡಕಾಟ ನಡೆಸಿದಾಗ ಆರೋಪಿತರ ಸುಳಿವು ದೊರೆತು ಐದು ಜನ ಆರೋಪಿಗಳನ್ನು ಬಂಧಿಸಿ, 7,63,000 ನಗದು ಹಾಗೂ ಕೃತ್ಯಕ್ಕೆ ಬಳಸಲಾದ 3 ಮೋಟಾರು ವಾಹನವನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.ಇದರಲ್ಲಿ ವಿಶೇಷವಾಗಿ ಶಿರಸಿ ಹೊಸ ಮಾರುಕಟ್ಟೆ ಠಾಣೆಯ ರಾಮಯ್ಯ ಪೂಜಾರಿ ಎಂಬ ಸಿಬ್ಬಂದಿಯು ದೂರುದಾರರಿಂದ ಆರೋಪಿತರ ಮುಖ ಚಹರೆ,ಅವರ ಕುರಿತು ಮಾಹಿತು ಪಡೆದು ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ಸಹಕಾರ ನೀಡಿ ಪ್ರಕರಣದ ತಿರುಳನ್ನು ಎಳೆ ಎಳೆಯಾಗಿ ಹೋರತೆಗೆದಿದ್ದರು.ಈ ವಿಷಯ ತಿಳಿದ ಎಸ್.ಪಿ ಎಂ ನಾರಾಯಣ ಅವರು ಪೊಲೀಸ್ ರಾಮಯ್ಯನಿಗೆ ಮುಖ್ಯಮಂತ್ರಿ ಪದಕಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ತನಿಖಾ ತಂಡಕ್ಕೆ 10,000 ರೂ ಬಹುಮಾನ ಘೋಷಿಸಿ ಹಿರಿಯ ಅಧಿಕಾರಿಗಳಿಗೆ ವಿಶೇಷ ಸಾಧನೆ ಉಲ್ಲೆಖ ಮಾಡುವುದಾಗಿ ಹಾಗೂ ಸಿಬ್ಬಂದಿಗಳಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಮ್ ನಿರ್ದೇಶನದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಮ್ ಜಗದೀಶ ಮಾರ್ಗದರ್ಶನದಂತೆ, ಡಿಎಸ್ಪಿ ಕೆ.ಎಲ್. ಗಣೇಶ ನೇತೃತ್ವದಲ್ಲಿ ತನಿಖಾಧಿಕಾರಿಯಾಗಿ ಸಿಪಿಐ ಶಶಿಕಾಂತ ವರ್ಮಾ ಹಾಗೂ ಪಿ.ಎಸ್.ಐ ಗಳಾದ ಯಲ್ಲಾಲಿಂಗ ಕನ್ನೂರು, ಸುನೀಲ್ ಕುಮಾರ್, ರಾಜಕುಮಾರ್ ಉಕ್ಕಲಿ, ಮಹಾಂತಪ್ಪ ಕುಂಬಾರ ಹಾಗೂ ಸಿಬ್ಬಂದಿಗಳಾದ ನಾಗಪ್ಪ ಲಮಾಣಿ, ಉದಯ ಗುನಗಾ, ಸತೀಶ ಭಟ್, ಕೊಟೇಶ ನಾಗರವವಳ್ಳಿ, ರಾಮಯ್ಯ ಪೂಜಾರಿ, ಸದ್ದಾಂ ಹುಸೇನ, ಹನುಮಂತ ಮಾಕಾಪೂರ, ಶಿವರಾಜ ಎಸ್. ಬಸವರಾಜ ಜಾಡರ್, ಮಂಜಪ್ಪ ಪಿ, ನಾರಾಯಣ ಎಮ್.ಎಸ್.,ಜೀಪ್ ಚಾಲಕರಾದ ಪಾಂಡುರಂಗ ಮತ್ತು ಕೃಷ್ಣ ಹಾಗೂ ಮಲ್ಲೇಶ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.