ಬೆಂಗಳೂರು : ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಪುರಾತನ ಕಾಲಸ ಆನೆ ದಂತ ತಯಾರಿ ಮಾಡುವ ವಸ್ತು, ವಾಕಿಂಗ್ ಸ್ಟಿಕ್, ಆಭರಣ ಇಡುವಂತಹ ಬಾಕ್ಸ್ ವಶಕ್ಕೆ ಪಡೆಯಲಾಗಿದೆ. ನೂರಾರು ವರ್ಷ ಹಳೇ ಆಂಬರ್ ಕೂಡ ಸಿಸಿಬಿ ವಶಕ್ಕೆ ಪಡೆದಿದ್ಧಾರೆ. ಸಿಸಿಬಿ ಪೊಲೀಸರು ಆರೋಪಿಗಳನ್ನ ಅರೆಸ್ಟ್ ಮಾಡಿದ್ಧಾರೆ.ಹಿಮ್ಮತ್ ಸಿಂಗ್, ಪ್ರವೀಣ್ ಸಾಂಬಿಯಾಲ್. ಅಬ್ದುಲ್ ಕಯೂಮ್ , ಮಹ್ಮದ್ ರಫೀಕ್ , ಮಹ್ಮದ್ ಇಸ್ರಾರ್ @ಬಾಬು ಸೇರಿ ಹಲವರನ್ನ ಅರೆಸ್ಟ್ ಮಾಡಲಾಗಿದೆ. ಆರೋಪಿಗಳು ಹರಿಯಾಣ, ಪಂಜಾಬ್, ಬೆಂಗಳೂರು, ಮೈಸೂರು ಮೂಲದವರಾಗಿದ್ಧಾರೆ. ಸಿಸಿಬಿ ಸದ್ಯ ರಾಜ ಮನೆತನದವರನ್ನು ಸಂಪರ್ಕ ಮಾಡಿ ಕೇಳಿದ್ಧಾರೆ. ವಶಕ್ಕೆ ಪಡೆದ ವಸ್ತುಗಳು ಡೆಹ್ರಾಡೂನ್ಗೆ ಪರಿಶೀಲನೆಗೆ ಕಳಿಸಲು ತೀರ್ಮಾನ ಮಾಡಿದ್ದು, ಆರೋಪಿಗಳು ಕೋಟ್ಯಾಂತರ ರೂಪಾಯಿಗೆ ಡೀಲ್ ನಡೆಸಲು ಮುಂದಾಗಿದ್ದರು. ಸಿಸಿಬಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ಧಾರೆಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ತಿಳಿಸಿದ್ಧಾರೆ.
ವರದಿ ಆಕಾಶ್ ಚಲವಾದಿ ಬೆಂಗಳೂರು 9008827439