ಕಲಬುರಗಿ:ಯುವಕನನ್ನು ಬರ್ಬರವಾಗಿ ಕೊಲೆಮಾಡಿರುವ ಘಟನೆ ಕಾಳಗಿ ತಾಲೂಕಿನ ಅರಣಕಲ್ ಕಿಂಡಿ ತಾಂಡಾದಲ್ಲಿ ನಡೆದಿದೆ.
ಆನಂದ್ ಚೌಹಾಣ್(25) ಕೊಲೆಯಾದ ಯುವಕ.
ಗ್ರಾಮದಲ್ಲಿ ಮರಗಮ್ಮದೇವಿ ಉತ್ಸವದ ಸಂಭ್ರಮದಲ್ಲಿದ್ದಾಗ
ಆನಂದ್,ಮನೆಯಿಂದ ಹೊರಬರುವುದನ್ನು ಕಾಯುತ್ತಿದ್ದ ಅದೇ ತಾಂಡಾದ ಕೆಲವರು ಆತನನ್ನು ಹೊರವಲಯಕ್ಕೆ ಕರೆದುಕೊಂಡು ಹೋಗಿ ಚಾಕುವಿನಿಂದ ಇರಿದು, ಕೊಲೆ ಮಾಡಿದ್ದಾರೆ.
ಆನಂದ್ ಮೇಲೆ ಹಲ್ಲೆ ಮಾಡುವುದನ್ನು ನೋಡಿ, ಆತನ ಸಹೋದರ ಆನಂದನ್ನ ರಕ್ಷಣೆಗೆ ಮುಂದಾಗಿದ್ದಾರೆ. ಆತನ ಮೇಲೂ ಕೂಡಾ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಕುಟುಂಬದವರು ಆನಂದನನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.ಆದರೆ ಆಸ್ಪತ್ರೆಗೆ ಹೋಗುವ ಮುನ್ನವೇ ಆನಂದ್ ಮೃತಪಟ್ಟಿದ್ದಾನೆ.
ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಆನಂದ್ ನನ್ನು ಕೊಲೆ ಮಾಡಿದ್ದಾರೆ ಎಂದು ವರದಿಯಾಗಿದೆ.ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.