ಕಡಬ -ಆಟೋ ರಿಕ್ಷಾ ಹಾಗೂ ಪಿಕಪ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪುಟ್ಟ ಬಾಲಕನೋರ್ವ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ – ಪಂಜ ರಸ್ತೆಯ ಕೋಡಿಂಬಾಳ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.
ಕಡಬದಿಂದ ಪಂಜ ಕಡೆಗೆ ತೆರಳುತ್ತಿದ್ದ ರಿಕ್ಷಾ ಹಾಗೂ ಪಿಕಪ್ ನಡುವೆ ಕೋಡಿಂಬಾಳ ಸಮೀಪದ ಮುರಚೆಡವು ಎಂಬಲ್ಲಿ ಢಿಕ್ಕಿ ಸಂಭವಿಸಿದೆ.
ಘಟನೆಯಲ್ಲಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪಂಜ ನಿವಾಸಿ ನವೀನ್ ಎಂಬವರ ಪುತ್ರ ಹಾರ್ದಿಕ್ (4) ಗಂಭೀರ ಗಾಯಗೊಂಡಿದ್ದು, ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ 108 ಆಂಬ್ಯುಲೆನ್ಸ್ ಮೂಲಕ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯುವ ಹಾದಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಪಿಕಪ್ ಅತೀ ವೇಗ ಚಾಲನೆ ಅಪಘಾತಕ್ಕೆ ಕಾರಣ.. ಆಟೋದವನಿಗೆ ಸರಿಯಾಗಿ ಕಣ್ಣು ಕಾಣಲ್ಲ..ಆತನಿಗೆ ಓವರ್ ಪವರ್ ಕನ್ನಡಕ ಇದೆ ಎನ್ನಲಾಗಿದೆ.
ಪಿಕಪ್ ಡ್ರೈವರ್ ಹರೀಶ್ ಓವರ್ ಸ್ಪೀಡ್ ಇದ್ದ ಎಂದು ತಿಳಿದು ಬಂದಿದೆ.ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.