*▪️ಸುರತ್ಕಲ್: ಅಕ್ರಮ ಟೋಲ್ ತೆರವು ಆಗ್ರಹಿಸಿ ಶಾಂತಿಯುತ ಪ್ರಜಾಸತ್ತಾತ್ಮಕ ಕಾಲ್ನಡಿಗೆ ಜಾಥಾ*
*▪️ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಜಾಥಾ ಯಶಸ್ವಿ ಗೊಳಿಸಲು ಕೆ.ಅಶ್ರಫ್ ಕರೆ.*
ಸುರತ್ಕಲ್: ನ,17
ಕಳೆದ 21ದಿನಳಿಂದ ಸುರತ್ಕಲ್ ಅಕ್ರಮ ಟೋಲ್ ತೆರವು ಆಗ್ರಹಿಸಿ
ಸಮಾನ ಮನಸ್ಕ ಸಂಘಟನೆಗಳ ಹಗಲು ರಾತ್ರಿ ಮುಷ್ಕರ ನಡೆಯುತ್ತಿದ್ದು, ಹೋರಾಟ ಇನ್ನಷ್ಟು ತೀವ್ರ ಗೊಳಿಸುವ ನಿಟ್ಟಿನಲ್ಲಿ ಶುಕ್ರವಾರ ಶಾಂತಿಯುತ ಪ್ರಜಾಸತ್ತಾತ್ಮಕ ಬೃಹತ್ ಕಾಲ್ನಡಿಗೆ ಜಾಥಾ ನಡೆಯಲಿದೆ. ಈ ಜಾಥಾಕ್ಕೆ ಸರ್ವರೂ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಗೊಳಿಸಲು, ಮಾಜಿ ಮೇಯರ್, ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಇದರ ಅಧ್ಯಕ್ಷ ಕೆ.ಅಶ್ರಫ್’ ಮಾಧ್ಯಮದ ಮುಖಾಂತರ ಸಾರ್ವಜನಿಕವಾಗಿ ಕರೆನೀಡಿದರು.
ಜಿಲ್ಲೆಯ ಸರ್ವ ಜಾತ್ಯಾತೀತ ನಿಲುವು ಹೊಂದಿರುವ ಪಕ್ಷಗಳು ಮತ್ತು ಸಮಾನ ಮನಸ್ಕ ಸಂಘಟನೆಗಳ ಜಂಟಿ ಆಶ್ರಯದಲ್ಲಿ, ಅಕ್ರಮ ಟೋಲ್ ತೆರವು ಆಗ್ರಹಿಸಿ, ಹಗಲು ರಾತ್ರಿ ಧರಣಿಗೆ ಬೆಂಬಲಿಸಿ, ಕೇಂದ್ರ ಸರಕಾರ ಮತ್ತು ಹೆದ್ದಾರಿ ಪ್ರಾಧಿಕಾರದ ಹಠಮಾರಿ ನಿಲುವು ಮತ್ತು ಜನ ವಿರೋಧಿ ಟೋಲ್ ಸಂಗ್ರಹ ಲೂಟಿ ನೀತಿ ವಿರೋಧಿಸಿ, ನಡೆಯುವ ಶಾಂತಿಯುತ ಪ್ರಜಾಸತ್ತಾತ್ಮಕ ಕಾಲ್ನಡಿಗೆ ಜಾಥಾ’ ನವಂಬರ್ 18 ರಂದು ಶುಕ್ರವಾರ ಅಪರಾಹ್ನ ಗಂಟೆ 03.00 ಕ್ಕೆ ಸುರತ್ಕಲ್ ತಡಂಬೈಲ್ ಜಂಕ್ಷನ್ ನಿಂದ ಎನ್.ಐ.ಟಿ. ಕೆ ಟೋಲ್ ಧರಣಿ ಸ್ಥಳದವರೆಗೆ ನಡೆಯಲಿದೆ.
ಜನವಿರೋಧಿ ಆಡಳಿತ ನೀತಿಯ ವಿರುದ್ಧ ನಡೆಯುವ ಈ ಜಾಥಾ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಬೆಗಳಿಸಬೇಕಾಗಿ ಮಾಧ್ಯಮದ ಮುಖಾಂತರ ಕೆ ಅಶ್ರಫ್’ ಅವರು ಸಾರ್ವಜನಿಕ ಕರೆ ನೀಡಿದ್ದಾರೆ.
ವರದಿ: ಅದ್ದಿ ಬೊಳ್ಳೂರು