ಅನ್ಯಕೋಮಿನ ಯುವ ಜೋಡಿ ರೂಮ್ ನಲ್ಲಿ ಪತ್ತೆ-ಸ್ಥಳದಲ್ಲಿ ಜಮಾಯಿಸಿದ್ದ ಸಂಘ ಪರಿವಾರದ ಕಾರ್ಯಕರ್ತರು
ಕಡಬ-ಅನ್ಯಕೋಮಿನ ಜೋಡಿಯೊಂದು ರೂಂನಲ್ಲಿ ಇದೆ ಎಂದು ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾಯಿಸಿದ್ದು ಪೊಲೀಸರ ಮದ್ಯ ಪ್ರವೇಶದಿಂದ ವಿಚಾರ ತಿಳಿಗೊಳಿಸಿದ ಘಟನೆ ಪೆರಾಬೆ ಗ್ರಾಮದ ಕುಂತೂರಿನಲ್ಲಿ ನಡೆದಿದೆ.
ಮುಡಿಪಿನ ಯುವಕ ಮಂಜೇಶ್ವರ ಮೂಲದ ಅನ್ಯ ಕೋಮಿನ ಯುತಿಯನ್ನು ಪೆರಾಬೆ ಬಳಿ ಬಾಡಿಗೆ ಕೋಣೆಗೆ ಕರೆತಂದಿದ್ದಾನೆ.ವಿಷಯ ತಿಳಿದು ಹಿಂದೂ ಸಂಘಟನೆಯ ಕಾರ್ಯಕರ್ತರು ಸೇರಿದ್ದರು.ಕಟ್ಟಡದ ಮಾಲಕ ಸ್ಥಳಕ್ಕೆ ಬರುವಂತೆಯೂ ಆಗ್ರಹಿಸಿದ್ದರು.
ಈ ಬಗ್ಗೆ ಮಾಹಿತಿ ತಿಳಿದು ಕಡಬ ಠಾಣಾ ಎಸ್ .ಐ ಆಂಜನೇಯ ರೆಡ್ಡಿ ನೇತೃತ್ವದ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮಾಹಿತಿ ಕಲೆ ಹಾಕಿದ್ದು,ನೆರೆದವರನ್ನು ತೆರಳುವಂತೆ ಸೂಚಿಸಿದ್ದಾರೆ.
ಯುವತಿಯನ್ನು ಪೊಲೀಸರು ಆಕೆಯ ಮನೆಗೆ ಕಳುಹಿಸಿರುವುದಾಗಿ ತಿಳಿದು ಬಂದಿದೆ.ಆದರೆ ಯುವಕ ಪರಾರಿಯಾಗಿದ್ದಾನೆ.ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.