ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ (ರಿ) ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಹಾಗೂ ಭಟ್ಕಳದ ವಿವಿಧ ಕನ್ನಡಪರ ಸಂಘಟನೆ ಹಾಗೂ ವಿವಿಧ ಸಾಮಾಜಿಕ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಭಟ್ಕಳದ ಲೈಟ್ ಹೌಸ್ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ
ಭಟ್ಕಳ-ಭಟ್ಕಳದ ಲೈಟ್ ಹೌಸ್ ನಲ್ಲಿ ಭದ್ರತಾ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಸ್ಥಳೀಯ ಮೂವರು ಮಾಜಿ ಸೈನಿಕರನ್ನು ಯಾವುದೇ ನೋಟಿಸ್ ಇಲ್ಲದೇ ಕೆಲಸದಿಂದ ತೆಗೆಯಲಾಗಿದೆ, ಪುನಃ ಅವರನ್ನು ಮರು ನೇಮಕ ಮಾಡಿಕೊಳ್ಳಬೇಕು , ಹೊರ ರಾಜ್ಯದಿಂದ (ಕೇರಳದಿಂದ) ನೇಮಿಸಿರುವ ಭದ್ರತಾ ಸಿಬ್ಬಂದಿಗಳನ್ನು ಕೈಬಿಡಬೇಕು, ಈ ಮೂಲಕ ಕರ್ನಾಟಕದ ಸ್ಥಳೀಯ ಮಾಜಿ ಸೈನಿಕರಿಗೆ ಅನ್ಯಾಯವಾಗುವಂತೆ ನೋಡಿಕೊಳ್ಳಬೇಕು, ಭಟ್ಕಳ ಲೈಟ್ ಹೌಸ್ ನ ಮೇಲ್ವಿಚಾರಕ ಇನ್ ಚಾರ್ಜ್ ಅನ್ನು ಕೂಡಲೇ ಬದಲಾವಣೆ ಮಾಡುವಂತೆ ಹಾಗೂ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಿಕೊಂಡು ಬಂದಿರುವ ನಮ್ಮ ಸ್ಥಳೀಯ ಮಾಜಿ ಸೈನಿಕರನ್ನು ಮರು ನೇಮಕ ಮಾಡುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷರಾದ ಡಾ ಶಿವಣ್ಣ ಎನ್ ಕೆ* ಇವರ ನೇತೃತ್ವದಲ್ಲಿ ಉತ್ತರಕನ್ನಡ ಜಿಲ್ಲೆಯ ಮಾಜಿ ಸೈನಿಕರ ಘಟಕ ಹಾಗೂ ಹೊನ್ನಾವರ ,ಭಟ್ಕಳ ಮಾಜಿ ಸೈನಿಕರು ಭಟ್ಕಳ ತಹಸೀಲ್ದಾರ್ ಮೂಲಕ ಲೈಟ್ ಹೌಸ ಗೋವಾ ನಿರ್ದೇಶಕರಿಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ಭಟ್ಕಳ ತಾಲೂಕ ಮಾಜಿ ಸೈನಿಕರ ಸಂಘದ ತಾಲೂಕ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯ್ಕ, ಪಾಂಡು ನಾಯ್ಕ, ಮುಂತಾದವರು ಉಪಸ್ಥಿತರಿದ್ದರು. ಭಟ್ಕಳ ಡಿ.ಎಸ್.ಪಿ ಕೆ.ಯು.ಬಿಳಿಯಪ್ಪ ಅವರು ಹಾಜರಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆ ನೀಡಿದರು.