ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತದ ಬಲೆಗೆ ಬಿದ್ದ ಕಡು ಭ್ರಷ್ಟ ಗ್ರಾಮಲೆಕ್ಕಾಧಿಕಾರಿ ಲಂಚಬಾಕ ಹರೀಶ್
ಉಡುಪಿ : ಉಡುಪಿ ಜಿಲ್ಲೆಯ ಹಿರಿಯಡ್ಕ ಇಲ್ಲಿನ ಕೊಡಿಬೆಟ್ಟು ಗ್ರಾಪಂನ ಪೆರ್ಣಂಕಿಲ ಗ್ರಾಮಲೆಕ್ಕಾಧಿಕಾರಿ ಹರೀಶ್ ಎನ್.ಪಿ. ಎಂಬವರು ಲಂಚ ಸ್ವೀಕರಿಸುತಿದ್ದಾಗ ಲೋಕಾಯುಕ್ತದ ಬಲೆಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳೀಯರೊಬ್ಬರು ಜಮೀನಿನ ಅಕ್ರಮ ಸಕ್ರಮಕ್ಕೆ ಪಂಚಾಯತ್ ಗೆ ಅರ್ಜಿ ಸಲ್ಲಿಸಿದ್ದು, ಸಕ್ರಮ ಮಾಡುವುದಕ್ಕೆ ಹರೀಶ್ ಅವರು 10,000 ರು.ಗಳ ಲಂಚದ ಬೇಡಿಕೆಯಿಟ್ಟಿದ್ದರು. ಈ ಬಗ್ಗೆ ಅರ್ಜಿದಾರರು ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅದರಂತೆ ಮಂಗಳವಾರ ಉಡುಪ ಲೋಕಾಯುಕ್ತ ಠಾಣಾ ಉಪಾಧೀಕ್ಷಕರಾದ ಜಯರಾಮ ಡಿ.ಗೌಡ ಮತ್ತು ಕಲಾವತಿ ಕೆ. ಹಾಗೂ ಸಿಬ್ಬಂದಿಗಳು ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿದ್ದು, ಆರೋಪಿತ ಅರ್ಜಿದಾರರಿಂದ 10,000 ರು. ಲಂಚ ಪಡೆದುಕೊಳ್ಳುತ್ತಿದ್ದಾಗ ಸ್ಥಳದಲ್ಲಿಯೇ (ರೆಡ್ ಹ್ಯಾಂಡ್) ಸಿಕ್ಕಿಬಿದ್ದಿರುತ್ತಾರೆ. ಆರೋಪಿತರನ್ನು ಬಂಧಿಸಿ, ಲಂಚದ ಹಣವನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.