ಬಿ.ಕೆ ಹರಿಪ್ರಸಾದ ಮತ್ತು ಅವರ ಜಾತಿ ಕಸುಬಿನ ಬಗ್ಗೆ ಮಾಜಿ ಸಚಿವ ಸಿ.ಟಿ.ರವಿ ಟೀಕೆ- ಭಟ್ಕಳ ಕಾಂಗ್ರೆಸ್ ಮುಖಂಡ , ನ್ಯಾಯವಾದಿ ಸಂತೋಷ್ ನಾಯ್ಕ ಖಂಡನೆ
ಭಟ್ಕಳ-ಕರ್ನಾಟಕ ಸರಕಾರದ ಮಾಜಿ ಮಂತ್ರಿ, ಬಿ ಜೆ ಪಿ ರಾಷ್ಟ್ರೀಯ ಕಾರ್ಯದರ್ಶಿಯಾದ ಸಿ ಟಿ ರವಿ ಮೊನ್ನೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಬಿ ಕೆ ಹರಿಪ್ರಸಾದ್ ರವರ ಬಗ್ಗೆ ಅತೀ ಲಗುವಾಗಿ ಮಾತಾಡಿದ್ದೂ ಅಲ್ಲದೇ ಅವರ ಜಾತಿಯ ಬಗ್ಗೆ ತುಂಬಾ ಕೀಳಾಗಿ ಮಾತಾಡಿದ್ದಾರೆ. ಅವರು ಒಂದುರಾಷ್ಟ್ರೀಯ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಮಾಜಿ ಮಂತ್ರಿಯಾಗಿ ಒಂದು ಜಾತಿ ಹಾಗೂ ಸಮುದಾಯದವರು ಮಾಡುವ ಕಸುಬಿನ ಬಗ್ಗೆ ಹಾಗೂ ನಾಯಕರ ಬಗ್ಗೆ ಈ ರೀತಿಯಾಗಿ ಕೀಳಾಗಿ ನಿಂದನೆ ಮಾಡಿದ್ದು ಅಕ್ಷಮ್ಯ. ಅವರ ದುರಹಂಕಾರದ ಮಾತು ಹಾಗೂ ವರ್ತನೆ ಅವರಂತ ಅಯೋಗ್ಯರಿಗೆ ಮಾತ್ರವೇ ಖುಷಿ ತರಬಹುದೇ ಹೊರತು ನಾಗರಿಕ ಸಮಾಜಲ್ಲಿ ಶೋಭೆ ತರುವಂತಹದ್ದಲ್ಲ. ಸಿ ಟಿ ರವಿಯವರ ಅಪ್ರಭುದ್ದ, ಬುದ್ದಿಮಾಂದ್ಯ ವರ್ತನೆಯಿಂದ ಅವರನ್ನು ಮಂತ್ರಿ ಮಂಡಲದಿಂದ ಹೊರಹಾಕ್ಕಿದ್ದಾರೆ ಎಂಬುದು ಕರ್ನಾಟಕದ ಜನತೆಗೆ ತಿಳಿದಿದೆ. ಬಿ ಕೆ ಹರಿಪ್ರಸಾದ್ ಅಡಿಗರ ಕುಲ ಕಸುಬಿನ ಬಗ್ಗೆ ಮಾತಾಡುವ ನೈತಿಕತೆ ಸಿ ಟಿ ರವಿಗಿಲ್ಲ. ನೀವು ಸಾರಾಯಿ ಕುಡಿರೋ ಇಲ್ಲವೋ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ. ಯಾವುದೇ ಜಾತಿ ಸಮುದಾಯದ ಬಗ್ಗೆ ಕೀಳಾಗಿ ಮಾತಾಡಿದರೆ ರಾಜ್ಯದ ಜನ ನಿಮ್ಮನ್ನು ಕ್ಷಮಿಸುವುದಿಲ್ಲ… ಹುಷಾರ್ ಎಂದು ಎಚ್ಚರಿಕೆ ನೀಡಿದ್ದಾರೆ.