ಮಹಿಳೆ ನಾಪತ್ತೆ -ಪತ್ತೆಗಾಗಿ ಪೊಲೀಸ್ ದೂರು
ಬೆಳ್ತಂಗಡಿ-ಗರ್ಡಾಡಿ ಗ್ರಾಮದ ಬಂಗಟ ಮನೆ ನಿವಾಸಿ ಜೋನ್ ಮೋನಿಸ್ ಎಂಬವರ ಪತ್ನಿ ಪ್ರಿಯಾ ಟಿ.ಎಂ (37) ರವರು ಡಿ. 22ರಂದು ಮಡಂತ್ಯಾರಿಗೆ ಹೋಗಿ ಮೊಬೈಲ್ ಸಿಮ್ ಕಾರ್ಡ್ ತರುವುದಾಗಿ ಹೇಳಿ ಹೋದವರು ವಾಪಾಸು ಮನೆಗೆ ಬಂದಿಲ್ಲ.
ಅವರ ಬಳಿ ಇದ್ದ ಎರಡು ಮೊಬೈಲ್ ನಂಬರ್ ಗಳು ಕೂಡ ಸ್ವಿಚ್ ಆಫ್ ಆಗಿದ್ದು ಎಲ್ಲಾ ಕಡೆ ಹುಡುಕಾಡಿದರೂ ಇದುವರೆಗೆ ಪತ್ತೆಯಾಗಿಲ್ಲ ಎಂದು ಪತಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮನೆಯಿಂದ ಹೊರಟ ವೇಳೆ ನೀಲಿ ಬಣ್ಣದಲ್ಲಿ ಬಿಳಿಹೂಗಳಿರುವ ಚೂಡಿದಾರದ ಟಾಪ್ ಮತ್ತು ನೀಲಿ ಬಣ್ಣ ಲೆಗ್ಗಿನ್ ಪ್ಯಾಂಟ್ ಧರಿಸಿದ್ದು, ಇವರು ಸುಮಾರು 5 ಅಡಿ 2 ಇಂಚು ಉದ್ದವಿದ್ದು ಸಾಧಾರಣ ಮೈಕಟ್ಟು ಹೊಂದಿದ್ದು ಬೂದು ಮೈಬಣ್ಣದವರಾಗಿದ್ದು, ಕನ್ನಡ, ಮಲೆಯಾಳಿ, ಕೊಂಕಣಿ ಮತ್ತು ತುಳು ಭಾಷೆ ಮಾತನಾಡುತ್ತಾರೆ.
ಇವರು ಪತ್ತೆಯಾದಲ್ಲಿ ಕೂಡಲೇ ಬೆಳ್ತಂಗಡಿ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರ ಮೊಬೈಲ್ ನಂಬ್ರ: 9480805370 ಮತ್ತು ಬೆಳ್ತಂಗಡಿ ಪೊಲೀಸ್ ಠಾಣಾ ದೂರವಾಣಿ ಸಂಖ್ಯೆ 08256-232093ಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.