ಭಟ್ಕಳ ಡಿ.ಎಸ್.ಪಿ ಕೆ.ಯು.ಬಿಳಿಯಪ್ಪ ಅವರು ಕುಂದಾಪುರಕ್ಕೆ -ಕುಂದಾಪುರ ಡಿ.ಎಸ್.ಪಿ ಶ್ರೀಕಾಂತ ಅವರು ಭಟ್ಕಳ ಕ್ಕೆ ಡಿ.ಎಸ್.ಪಿ ಆಗಿ ವರ್ಗಾವಣೆ ಮಾಡಿ ಸರ್ಕಾರ ಆದೇಶ
ಭಟ್ಕಳ- ಭಟ್ಕಳ ಡಿ.ಎಸ್.ಪಿ ಕೆ.ಯು. ಬೆಳ್ಳಿಯಪ್ಪರನ್ನು ಕುಂದಾಪುರಕ್ಕೆ ಮತ್ತು ಕುಂದಾಪುರ ಡಿ.ಎಸ್.ಪಿ ಶ್ರೀಕಾಂತ್ ಅವರನ್ನು ಭಟ್ಕಳ ಕ್ಕೆ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಕಳೆದ 1ವರುಷಗಳಿಂದ ಭಟ್ಕಳ ಡಿವಾಯ್‌ಎಸ್ಪಿಯಾಗಿ ಕೆ.ಯು.ಬಿಳಿಯಪ್ಪ ಕೆಲಸ ಮಾಡಿಕೊಂಡಿದ್ದ ಡಿವಾಯ್ ಎಸ್ಪಿ ಕೆ.ಯು. ಬೆಳ್ಳಿಯಪ್ಪರವರು, ಪೊಲೀಸ್ ವಲಯದಲ್ಲಿ ಎಲ್ಲರ ಪ್ರೀತಿ, ವಿಶ್ವಾಸವನ್ನು ಸಂಪಾದಿಸಿಕೊoಡಿದ್ದರು ಮತ್ತು ಪ್ರಾಮಾಣಿಕ ಅಧಿಕಾರಿ ಆಗಿದ್ದರು.
ಇದೀಗ ಬೆಳ್ಳಿಯಪ್ಪ ಅವರ ಜಾಗಕ್ಕೆ ಕುಂದಾಪುರದಿAದ ಶ್ರೀಕಾಂತ ಕೆ. ಅವರನ್ನು ವರ್ಗಾವಣೆ ಮಾಡಲಾಗಿದ್ದು, ಒಂದೆರಡು ದಿನಗಳಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ಲಭಿಸಿದೆ. ಶ್ರೀಕಾಂತ ಅವರು ಈ ಹಿಂದೆ ಜಿಲ್ಲಾ ಎಸಿಬಿಯಲ್ಲಿ ಡಿ.ಎಸ್.ಪಿ ಆಗಿ ಕೆಲಸ ನಿರ್ವಹಿಸಿ ಜಿಲ್ಲೆಯ ಹಲವು ಕಡು ಭ್ರಷ್ಟ ಅಧಿಕಾರಿಗಳನ್ನು ಬೇಟೆಯಾಡಿದ್ದರು.