ಕಾರು ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ನುಡುವೆ ಭೀಕರ ಅಪಘಾತ-ಕಾರಿನಲ್ಲಿದ್ದ 4 ಜನ ಸಾವು
ಅಂಕೋಲಾ- ಕಾರು ಮತ್ತು ಸಾರಿಗೆ ಸಂಸ್ಥೆ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರನಲ್ಲಿದ್ದ ನಾಲ್ವರು ದುರ್ಮರಣ ಹೊಂದಿದ ಘಟನೆ ರಾ.ಹೆ 66 ರ ಬಾಳೆಗುಳಿ ವರದರಾಜ ಹೊಟೇಲ್ ಹತ್ತಿರ ನಡೆದಿದೆ.. ತಮಿಳುನಾಡು ಮೂಲದವರು ಎನ್ನಲಾದ ಇವರು ಬಾಳೇ ಗುಳಿ ಕಡೆಯಿಂದ ಅಂಕೋಲಾ ಕಡೆಗೆ ಕಾರು ಚಲಾಯಿಸಿಕೊಂಡು ಬರುತ್ತಿದ್ದಾಗ,,ಅದಾವುದೋ ಕಾರಣದಿಂದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ದಾಟಿ ವಿರುದ್ಧ ದಿಕ್ಕಿಗೆ ಜೋರಾಗಿ ಬಂದು , ಅಂಕೋಲಾ ಕಡೆಯಿಂದ ಯಲ್ಲಾಪುರ ಹುಬ್ಬಳ್ಳಿ ಮಾರ್ಗವಾಗಿ- ನವಲಗುಂದಕ್ಕೆ ಹೊರಟಿದ್ದ ಸಾರಿಗೆ ಸಂಸ್ಥೆಯ ಬಸ್ಸಿಗೆ ಜೋರಾಗಿ ಗುದ್ದಿಕೊಂಡು 8-10 ಮೀಟರ್ ದೂರ ತಳ್ಳಲ್ಪಟ್ಟಿದೆ ಎನ್ನಲಾಗಿದ್ದು,ಕಾರು ಸಂಪೂರ್ಣ ಜಖಂ ಗೊಂಡು ನುಜ್ಜು ಗುಜ್ಜಾಗಿದೆ.
ಬದುಕುಳಿದಿರ ಬಹುದೆಂದು ಕಾರನಲ್ಲಿದ್ದ ಒರ್ವನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಅವರು ಕೊನೆಯುಸಿರೆಳೆದಿದ್ದು, ಘಟನಾ ಸ್ಥಳದಲ್ಲಿ ಇನ್ನೀರ್ವರು ಸಿಡಿದು ಬಿದ್ದು ಮೃತಪಟ್ಟಿದ್ದಾರೆ. . ಕಾರನಲ್ಲಿ ಡ್ರೈವಿಂಗ್ ಸೀಟ್ ಎಡ ಪಕ್ಕದಲ್ಲಿ ಕುಳಿತಿದ್ದ ಇನ್ನೋರ್ವ ನುಜ್ಜು ಗುಜ್ಜಾದ ಕಾರ್ ನಲ್ಲಿ ಸಿಲುಕಿ ಮೃತ್ ಪಟ್ಟಿದ್ದು ಪಿ ಎ ಸೈ ಪ್ರವೀಣ ಕುಮಾರ ಮತ್ತಿತರರು ಸ್ವತಃ ಕಬ್ಬಿಣದ ಸಲಾಕೆ ಬಳಸಿ ಡೋರ್ ಓಪನ್ ಮಾಡಿ ದೇಹ ಹೊರತೆಗೆದಿದ್ದಾರೆ. ಈ ಮೂಲಕ ಹೊಸ ವರ್ಷದ ಮೊದಲ ದಿನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ದುರಂತ ಸಾವಿಗೀಡಾಗಿದ್ದು, ಮೃತರ ವಿಳಾಸ, ಎಲ್ಲಿಂದ ಎಲ್ಲಿಗೆ ಹೊರಟಿದ್ದರು., ಘಟನೆಗೆ ಕಾರಣಗಳೇನು ಎಂಬ ಕುರಿತು ಮಾಹಿತಿ ದೊರೆಯ ಬೇಕಿದೆ.
ಘಟನಾ ಸ್ಥಳಕ್ಕೆ ಪೋಲೀಸ್ ಇಲಾಖೆಯ ಹಿರಿ- ಕಿರಿಯ ಅಧಿಕಾರಿಗಳು , 112 ಸಿಬ್ಬಂದಿಗಳು, ಐ ಆರ್ ಬಿ ಸಿಬ್ಬಂದಿಗಳು ಹಾಜರಾಗಿ ಸ್ಥಳೀಯರ ಸಹಕಾರದಲ್ಲಿ ಮೃತ್ ದೇಹಗಳನ್ನು ಸಾಗಿಸಲು ಮತ್ತು ಹೆದ್ದಾರಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸಾರಿಗೆ ಸಂಸ್ಥೆ ಸ್ಥಳೀಯ ಘಟಕದ ಅಧಿಕಾರಿಗಳು ಸ್ಥಳಕ್ಕೆ ಬಂದು, ಅಪಘಾತಗೊಂಡ ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ (ಬಸ್ ) ಮಾಡಿ ಮುಂದಿನ ಪಯಣಕ್ಕೆ ಅನುವು ಮಾಡಿಕೊಟ್ಟರು ಕ್ರೇನ್ ಬಳಸಿ ನುಜ್ಜು ಗುಜ್ಜಾದ ಕಾರ್ ನ್ನು ಪಕ್ಕಕ್ಕೆ ಎಳೆದು ಹೆದ್ದಾರಿ ಸಂಚಾರಕ್ಕೆ ತೊಡಕಾಗದಂತೆ ಪೋಲಿಸರು ಕರ್ತವ್ಯ ನಿರ್ವಹಿಸಿದರು. ತಹಶೀಲ್ದಾರ ಉದಯ ಕುಂಬಾರ ಸ್ಥಳ ಪರಿಶೀಲಿಸಿದರು.