ಗಡಿಬಿಡಿಯಿಂದ ಜಾರಿಗೆ ತಂದಿರುವ ನೂತನ ಶಿಕ್ಷಣ ನೀತಿ ಕರ್ನಾಟಕದ ದುರಂತ- ಶಾಸಕ ಬಿ.ಎಂ.ಫಾರೂಖ್
ಭಟ್ಕಳ: ದೇಶದಲ್ಲೇ ಮೊಟ್ಟಮೊದಲು ನೂತನ ಶಿಕ್ಷಣ ನೀತಿ ಜಾರಿಗೆ ತಂದಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕದಲ್ಲಿ ಶಿಕ್ಷಣ ಮತ್ತು ಶಿಕ್ಷಣ ಸಂಸ್ಥೆಗಳ ಸ್ಥಿತಿ ಶೋಚನೀಯವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಖ್ ಹೇಳಿದರು.
ಅವರು ಸೋಮವಾರ ಅಂಜುಮನಾಬಾದ್ ನಲ್ಲಿ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಸಮಾರೋಪ ಸಮಾರಂಭದ ಎರಡನೆ ದಿನದ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಯಾವುದೇ ಪೂರ್ವ ತಯಾರಿ ಇಲ್ಲದೆ ಗಿಡಿಬಿಡಿಯಲ್ಲಿ ಜಾರಿಗೆ ತಂದಿರುವ ನೂತನ ಶಿಕ್ಷಣ ನೀತಿಯಿಂದಾಗಿ ರಾಜ್ಯದಲ್ಲಿ ಶಿಕ್ಷಣವು ಮತ್ತಷ್ಟು ಕುಂಠಿತಗೊಳ್ಳಲಿದೆ. ಸರ್ಕಾರಿ ಶಾಲೆಯಲ್ಲಿ ಶೌಚಾಲಯ ಮತ್ತಿತರ ಮೂಲಭೂತ ಸೌಕರ್ಯಕ್ಕೂ ಕೊರತೆಯಿದೆ ಅದಾವುದನ್ನು ಗಣನೆಗೆ ತೆಗೆದುಕೊಳ್ಳÀದ ಸರ್ಕಾರ ಕಾಟಚಾರಕ್ಕೆ ಹೊಸಶಿಕ್ಷಣ ನೀತಿ ಜಾರಿಯ ಬೆನ್ನಿಗೆ ಬಿದ್ದಿದ್ದು ರಾಜ್ಯದ ದುರಂತವಾಗಿದೆ ಎಂದ ಅವರು, ನಾನು ಹೊಸ ಶಿಕ್ಷಣ ನೀತಿಯ ವಿರೋಧಿಯಲ್ಲ ಆದರೆ ಯಾವುದೇ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಮೊದಲು ಅದರ ಸಾಧಕಬಾಧಕಗಳನ್ನು ಚರ್ಚಿಸದೆ ಪೂರ್ವಲೋಚನೆಯಿಲ್ಲದೆ ಜಾರಿಗೆ ತಂದಿರುವುದ ವಿರೋಧಿಯಾಗಿದ್ದೇನೆ ಎಂದರು.
ಪಸ್ರಕ್ತ ರಾಜ್ಯದಲ್ಲಿರುವ ಸರ್ಕಾರ ಅಲ್ಪಸಂಖ್ಯಾತರ ಯೋಜನೆಗಳನ್ನು ಕಡಿತಗೊಳಿಸುವುದರ ಹಿಂದೆ ಬಿದ್ದಿದೆ. ಮೀಸಲಾತಿ, ವಿದ್ಯಾರ್ಥಿವೇತನ ಮತ್ತಿತರ ಯೋಜನೆಗಳು ನಿಧಾನವಾಗಿ ಸ್ಥಗಿತಗೊಳ್ಳಲಿದೆ. ಸಾಮಾಜಿಕವಾಗಿ ಹಿಂದುಳಿದವರಿಗೆ ಮೀಸಲಾತಿ ದೊರೆಯಬೇಕು ಎಂಬ ಬಾಬಾ ಸಾಹೇಬರ ಆಶಯಕ್ಕೆ ವಿರುದ್ಧವಾಗಿ ಬಿಜೆಪಿ ಸರ್ಕಾರ ನಡೆದುಕೊಳ್ಳುತ್ತಿರುವುದಕ್ಕೆ ತೀರ ವಿರೋಧ ವ್ಯಕ್ತಪಡಿಸಿದ ಅವರು, ದೇಶದಲ್ಲಿ ದಲಿತ ಸಮುದಾಯಕ್ಕಿಂತಲೂ ಅಲ್ಪಸಂಖ್ಯಾತರ ಸ್ಥಿತಿ ಶೋಚನೀಯವಾಗಿದೆ ಎಂಬುದನ್ನು ಸಾಚಾರ ಸಮಿತಿ ಬೊಟ್ಟು ಮಾಡಿ ತೋರಿಸಿದೆ ಎಂದರು. ಅಲ್ಪಸಂಖ್ಯಾತರ ಕುರಿತು ಅಧ್ಯಯನ ಮಾಡಿರುವ ಪ್ರತಿಯೊಂದು ಸಮಿತಿಗಳು ಅಲ್ಪಸಂಖ್ಯಾತರಿಗೆ ಹೆಚ್ಚಿನ ಮೀಸಲಾತಿಯ ಅಗತ್ಯವಿದೆ ಎಂದು ಹೇಳಿವೆ ಆದರೆ ರಾಜ್ಯದ ಬಿಜೆಪಿ ಸರ್ಕಾರ ಮಾತ್ರ ಒಂದೊAದಾಗಿ ಅಲ್ಪಸಂಖ್ಯಾತರಿಗೆ ಸಿಗಬೇಕಾಗಿದ್ದ ಸೌಲಭ್ಯಗಳನ್ನು ಕಡಿತಗೊಳಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಭಟ್ಕಳದ ನವಾಯತ್ ಸಮುದಾಯ ಪ್ರಗತಿಪರ ಆಲೋಚನೆಗಳನ್ನು ಹೊಂದಿದ್ದು ಈ ಸಮುದಾಯದ ಕುರಿತಂತೆ ಸಮಗ್ರ ಅಧ್ಯಾಯನದ ಅವಶ್ಯಕತೆಯಿದೆ. ಇದಕ್ಕಾಗಿ ನವಾಯತ್ ಅಕಾಡೆಮಿ ಸ್ಥಾಪನೆಯಾಗಬೇಕು ಎಂದು ಆಗ್ರಹಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಮುಝಮ್ಮಿಲ್ ಕಾಝಿಯಾ, ಅಂಜುಮನ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಹಿರಿಯರನ್ನು ಸ್ಮರಿಸಿಕೊಂಡಿದ್ದು ಅವರ ತ್ಯಾಗದಿಂದಾಗಿ ಇಂದು ಅಂಜುಮನ್ ಬೃಹತ್ ಶಿಕ್ಷಣ ಸಂಸ್ಥೆಯಾಗಿ ಬೆಳೆದು ನಿಂತಿದೆ. ಜನರ ಬಳಿ ಒಂದೊAದು ರೂಪಾಯಿ ಹಣ ವಸೂಲಿ ಮಾಡಿ ಇದನ್ನು ಕಟ್ಟಿದರು. ಕೆಲವರು ತಮ್ಮ ಸೊತ್ತು, ಆಸ್ತಿಗಳನ್ನು ಅಂಜುಮನ್ ಹೆಸರಿಗೆ ಬರೆದುಕೊಟ್ಟರು ಅವರ ಶ್ರಮದಿಂದಾಗಿಯೇ ಇಂದು ನಾವು ಇಲ್ಲಿದ್ದೇವೆ ಎಂದರು.
ಸೈನ್ಸ್ ಇನ್ಸಿ÷್ಟಟ್ಯೂಟ್ ಆಫ್ ಸೋಶಿಯಲ್ ಲೀಡರ್Àಶಿಫ್ ಕ್ಯಾಲಿಕಟ್‌ನ ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ರಶೀದ್ ಗಝ್ಝಾಲಿ ಪ್ರೇರಕ ಮಾತುಗಳನ್ನಾಡಿದರು. ಅಂಜುಮನ್ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳಾಗ ಡಾ.ಝುಬೇರ್ ಕೋಲಾ, ಡಾ.ರ‍್ರಾರ್ ಇಕ್ಕೇರಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊAಡಿರು.
ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಅಂಜುಮನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಇಸ್ಮಾಯಿಲ್, ಅಂಜುಮನ್ ಅಲುಮ್ನಿ ಅಸೋಸಿಯೇಶನ್ ಸಂಚಾಲಕ ಅಶ್ಫಾಖ್ ಸಾದಾ, ಇಂಡಿಯನ್ ನವಾಯತ್ ಫೋರಂ ಅಧ್ಯಕ್ಷ ಅಬ್ದುಲ್ ಮಜೀದ್ ಜುಕಾಕೋ, ಅಂಜುಮನ್ ಉಪಾಧ್ಯಕ್ಷ ಸಮೀರ್ ಸಖ್ಖಾಫ್, ಮುಸ್ಬಾ, ಕೆರನಾ ಮುಸ್ಲಿಮ್ ಖಲೀಜ್ ಕೌನ್ಸಿಲ್ ಅಧ್ಯಕ್ಷ ಮುಹಮ್ಮದ್ ಯೂನೂಸ್ ಕಾಝಿಯಾ, ಮುಹಮ್ಮದ್ ಸಾದಿಕ್ ಪಿಲ್ಲೂರ್, ಇಸ್ಹಾಖ್ ಶಾಬಂದ್ರಿ ಮತ್ತಿತರರು ಉಪಸ್ಥಿತರಿದ್ದರು.
ಅಂಜುಮನ್ ಕಾರ್ಯಾಕಾರಿ ಸಮಿತಿ ಸದಸ್ಯ ಮುಬಶ್ವೀರ್ ಹುಸೇನ್ ಹಲ್ಲಾರೆ ಸ್ವಾಗತಿಸಿದರು. ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಇಸ್ಹಾಖ್ ಶಾಬಂದ್ರಿ ಪ್ರಸ್ತಾವಿಕವಾಗಿ ಮಾತನಾಡಿದರು. ಮಸಾಬ್ ಆಬಿದಾ ಹಾಗೂ ಮುಷ್ತಾಖ್ ಭಾವಿಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ಆಪ್ತಾಬ್ ಖಮರಿ ಧನ್ಯವಾದ ಅರ್ಪಿಸಿದರು.