ಹಿಂದೂ ಸಂಘಟನೆ ಕಾರ್ಯಕರ್ತನಿಗೆ ಮನೆ ನಿರ್ಮಿಸಿ ಕೊಟ್ಟ ಬೈಂದೂರಿನ ಧಾನ ಶೂರ ಕರ್ಣ ಡಾ. ಗೋವಿಂದ ಬಾಬು ಪೂಜಾರಿ
ಬೈಂದೂರು – ಹಲವು ವರ್ಷಗಳಿಂದ ಹಿಂದೂ ಸಂಘಟನೆ ಹಾಗೂ ಗೋ ರಕ್ಷಕ ಕಾರ್ಯಕರ್ತನಾಗಿ ಗುರುತಿಸಿಕೊಂಡಿರುವ ರಾಜು ಮರವಂತೆ ಎರಡು ವರ್ಷಗಳ ಹಿಂದೆ ಸಂಘಟನೆಯ ಕಾರ್ಯಕ್ರಮಕ್ಕೆ ಹೋಗುವ ವೇಳೆ ಸಕಲೇಶಪುರದಲ್ಲಿ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ತನ್ನ ಒಂದು ಕಾಲುಗಳು ಅಪಘಾತದಲ್ಲಿ ಸಂಪೂರ್ಣ ನಡೆಯಲಾರದ ಸ್ಥಿತಿಯಲ್ಲಿ ಕುಟುಂಬದ ಜೊತೆಗೆ ಬದುಕು ಸಾಧಿಸುತ್ತಿರುವ ಸಕ್ರಿಯ ಹಿಂದೂ ಕಾರ್ಯಕರ್ತನಿಗೆ ಸಮಾಜ ಸೇವಕ, ಆಶ್ರಯ ದಾತ, ಡಾ ಗೋವಿಂದ ಬಾಬು ಪೂಜಾರಿಯವರು ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ವತಿಯಿಂದ ಇಂದು 11 ನೇ ಮನೆ ನಿರ್ಮಿಸಿ ಕೊಟ್ಟು ಮನೆ ಕೀಯನ್ನು ಫಲಾನುಭವಿ ರಾಜು ಮರುವಂತೆ ದಂಪತಿಗಳಿಗೆ ಹಸ್ತಾಂತರ ಮಾಡಿದರು
ಮನೆ ಗೃಹಪ್ರವೇಶೋತ್ಸವ ಕಾರ್ಯಕ್ರಮಕ್ಕೆ ಶ್ರೀ ಅವಧೂತ ವಿನಯ್ ಗುರೂಜಿ ಗೃಹಪ್ರವೇಶೋತ್ಸವಕ್ಕೆ ಆಗಮಿಸಿ ಮನೆ ನಿರ್ಮಿಸಿ ಕೊಟ್ಟ ಆಶ್ರಯದಾತನಿಗೂ ಹಾಗೂ ಮನೆಯ ಫಲಾನುಭವಿಗಳು ಆಶೀರ್ವದಿಸಿ ಮಾತನಾಡಿ ಎರಡು ವರ್ಷಗಳ ಹಿಂದೆ ಕಾರು ಅಪಘಾತದಲ್ಲಿ ಕಾಲು ಕಳೆದುಕೊಂಡ ರಾಜು ಮರುವಂತೆ ದಂಪತಿಗಳಿಗೆ ನನ್ನ ಕಡೆಯಿಂದ ಎರಡು ಹಸುಗಳು ಹಾಗೂ ಹಸುವಿನ ಕೊಟ್ಟಿಗೆ ಶೀಘ್ರದಲ್ಲಿ ನಿರ್ಮಿಸಿ ಕೊಡುವುದಾಗಿ ವಿನಯ್ ಗುರೂಜಿ ಹೇಳಿದರು.
ವೇದಿಕೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಭಿನವ್ ಹಲಾಶ್ರೀ ಸ್ವಾಮಿಗಳು ಮಾತನಾಡಿ ಹಿಂದೂ ಕಾರ್ಯಕರ್ತರು ತಾವು ಮಾಡದ ತಪ್ಪಿಗೆ ಅಮಾಯಕರು ಜೈಲಿನಲ್ಲಿ ಬಂಧನ ಕೊಳಗಾಗಿರುತ್ತಾರೆ ಅಂಥವರನ್ನು ಕಾನೂನು ಅನುಸಾರವಾಗಿ ಜೈಲಿನಿಂದ ಬಿಡಿಸಿ ಕೊಂಡು ಬರಲು ನಾವೆಲ್ಲರೂ ಇಂದಿನಿಂದಲೇ ಒಗ್ಗಟ್ಟಾಗಿ ತಮ್ಮ ಕೈಲಾದ ಸಹಾಯ ಮಾಡಬೇಕು ಎಂದು ಹೇಳಿ ಹಿಂದೂ ಕಾರ್ಯಕರ್ತರಿಗೆ ಧೈರ್ಯ ತುಂಬಿ ಮುಂದಿನ ದಿನದಲ್ಲಿ ನಾವೆಲ್ಲರೂ ಒಳ್ಳೆಯ ದೇಶದ ಪ್ರಜೆಗಳಾಗಿ ಬದುಕಬೇಕೆಂದು ಹೇಳಿದರು.
ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಫೋನ್ ಕರೆಯ ಮೂಲಕ ಹಿಂದೂ ಕಾರ್ಯಕರ್ತರಿಗೆ ಹಾಗೂ ಈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಹಿಂದೂ ಸಂಘಟನೆ ಮುಖಂಡರು ಹಾಗೂ ವಿವಿಧ ಪದಾಧಿಕಾರಿಗಳು, ಗೋವಿಂದ ಬಾಬು ಪೂಜಾರಿ ಅಭಿಮಾನಿಗಳು, ಬೈಂದೂರು ಭಾಗದ ಸಾರ್ವಜನಿಕರು ಹಿಂದೂ ಕಾರ್ಯಕರ್ತರು ಉಪಸ್ಥಿತರಿದ್ದರು.