ಲಾರಿ ಮತ್ತು ಬೈಕ ನಡುವೆ ಭೀಕರ ಅಪಘಾತ ವಿದ್ಯಾರ್ಥಿಗಳಿಬ್ಬರು ಸ್ಥಳದಲ್ಲೇ ಸಾವು
ಬ್ರಹ್ಮಾವರ – ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ವಿದ್ಯಾರ್ಥಿಗಳು ಕಾಲೇಜಿನಿಂದ ಮನೆಗೆ ತೆರಳುತ್ತಿರುವಾಗ ಕೋಟದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಸವಾರರಿಬ್ಬರು ಲಾರಿ ಅಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತಪಟ್ಟ ವಿದ್ಯಾರ್ಥಿಗಳು ಕೋಟದ ಸುಮಿತ್ ಕುಮಾರ್ ಹಾಗೂ ವಾಗೀಶ್ ಕೆದ್ಲಾಯ ಎಂದು ತಿಳಿದು ಬಂದಿದೆ.
ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.