ಸುಳ್ಯ -ಮರ್ಕಂಜ ಗ್ರಾಮದಲ್ಲಿ ಔಷಧಿಗೆಂದು ತೆರಳಿದ ಮಹಿಳೆಯೊಬ್ಬರು ಮನೆಗೆ ಮರಳಿ ತೆರಳದೆ ನಾಪತ್ತೆಯಾದ ಘಟನೆ ನಡೆದಿದೆ.
ಮರ್ಕಂಜ ಗ್ರಾಮದ ರಾಜಶೇಖರ ಅವರ ಪತ್ನಿ ಕೀರ್ತಿಶ್ರೀ ನಾಪತ್ತೆಯಾದವರು ಎಂದು ಗುರುತಿಸಲಾಗಿದೆ.
ಜನವರಿ 21ರಂದು ಎಲಿಮಲೆ ಕ್ಲಿನಿಕ್‌ಗೆ ಔಷಧಿಗೆಂದು ಹೋದವರು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾರೆ. ನಾನೇ ಆಕೆಯನ್ನು ಆಸ್ಪತ್ರೆಗೆ ಹೋಗಲೆಂದು ನನ್ನ ಮನೆಯಿಂದ ನನ್ನ ಜೀಪಿನಲ್ಲಿ ಬೆಳಿಗ್ಗೆ 10 ಗಂಟೆಗೆ ಆಕೆಯನ್ನು ಕರೆದುಕೊಂಡು ಹೋಗಿ ಬಸ್ಸಿನಲ್ಲಿ ಕಳಿಸಿದ್ದೆ. ನಂತರ 10.20 ಕ್ಕೆ ಅವಳ ಮೊಬೈಲ್ ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಎಂದು ಪತಿ ದೂರಿನಲ್ಲಿ ವಿವರಿಸಿದ್ದಾರೆ. ಅಲ್ಲದೆ, ಬಳಿಕ ನಾನು ಆಕೆಯ ತಾಯಿಯ ಮನೆ ದೇವಚಳ್ಳದ ಮಂಜೋಳ್ ಕಜೆಗೆ ಫೋನ್ ಮಾಡಿ ಕೇಳಿದಾಗ ಅಲ್ಲಿಗೂ ಕೂಡ ಆಕೆ ಬಂದಿರುವುದಿಲ್ಲ ಎಂಬ ವಿಷಯವನ್ನು ಅವರ ತಾಯಿ ತಿಳಿಸಿರುತ್ತಾರೆ.