ಭಟ್ಕಳ- ಹೊನ್ನಾವರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದ ಟಿಕೆಟ್ ಸಿಗದಿದ್ದರೆ, ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧೆ- ಹಿಂದೂ ಮುಖಂಡ ಶಂಕರ ನಾಯ್ಕ ಚೌತನಿ ಘೋಷಣೆ
ಭಟ್ಕಳ- ಬಿಜೆಪಿ ಪಕ್ಷದ ಭಟ್ಕಳ – ಹೊನ್ನಾವರ ವಿಧಾನಸಭಾ ಕ್ಷೇತ್ರದ ಎಂ.ಎಲ್.ಎ ಟಿಕೆಟ್ ಪ್ರಬಲ ಆಕಾಂಕ್ಷಿ , ಹಿಂದೂ ಸಂಘಟನೆ ಮುಖಂಡ ಶಂಕರ ನಾಯ್ಕ ಚೌತನಿ ತನಗೆ ಬಿಜೆಪಿ ಪಕ್ಷದ ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ 2023 ರ ವಿಧಾನಸಭಾ ಚುನಾವಣೆಯಲ್ಲಿ ಭಟ್ಕಳ- ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ. ಈ ಹಿಂದೆ ಅವರು ಬಿಜೆಪಿ ರಾಜ್ಯ , ಜಿಲ್ಲಾ ಮತ್ತು ತಾಲೂಕ ಅಧ್ಯಕ್ಷರುಗಳಿಗೆ ಪತ್ರ ಬರೆದು ತನಗೆ ತನಗೆ ಟಿಕೆಟ್ ನೀಡುವಂತೆ ಈ ರೀತಿ ಮನವಿ ಮಾಡಿದ್ದರು.ನನ್ನ ಬಿಜೆಪಿ ಸದಸ್ಯತ್ವದ ಸಂಖ್ಯೆ ೧೦೯೬೪೩೩೭೪೬ ಆಗಿದ್ದು,
ನಾನು ಕಳೆದ ೨೦ ವರ್ಷಗಳಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿಸ್ತಿನ ಸಿಪಾಯಿ ಆಗಿದ್ದು ಸಂಘ ಪರಿವಾರದ ಹಲವಾರು ಸಂಘಟನೆಗಳಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿರುತ್ತೇನೆ.
ಒಂದು ಅವಧಿಯಲ್ಲಿ ಭಾರತೀಯ ಜನತಾ ಪಕ್ಷದ ಭಟ್ಕಳ ತಾಲೂಕು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷನಾಗಿ ಕೆಲಸ ಮಾಡಿದ್ದೂ ಇರುತ್ತದೆ.ಹಿಂದುತ್ವ,ರಾಷ್ಟ್ರೀಯತೆ,ಸಾಮಾಜಿಕ ನ್ಯಾಯ,ಸಾಮಾಜಿಕ ಹೋರಾಟ ಮತ್ತು ನಾಡು ನುಡಿಯ ರಕ್ಷಣೆಗಾಗಿ ಪರಿವಾರದ ಸಂಘಟನೆಗಳು ಮತ್ತು ಪಕ್ಷ ಕರೆ ಕೊಟ್ಟಾಗ ನಿಸ್ವಾರ್ಥದಿಂದ ಆ ಹೋರಾಟದಲ್ಲಿ ಭಾಗಿಯಾಗಿ ಕೇಸ್ ಕೋರ್ಟ್ ಜೈಲು ವಾಸವನ್ನು ಅನುಭವಿಸಿದ್ದೂ ಇರುತ್ತದೆ.
ಇದೇ ನನ್ನ ವಿನಂತಿ ಪತ್ರವೆಂದು ಪರಿಗಣಿಸಿ ಮತ್ತು ನನ್ನ ಎಲ್ಲಾ ಹೋರಾಟವನ್ನು ಸಾಮಾಜಿಕ ಸೇವೆಯನ್ನು ಹಾಗೂ ಪಕ್ಷ ಸಂಘಟನೆಗಾಗಿ ನಾನು ನಿಭಾಯಿಸಿದ ಕರ್ತವ್ಯವನ್ನು ಪರಿಗಣಿಸಿ ಮತ್ತು ಹಿಂದುತ್ವ ರಾಷ್ಟ್ರವಾದ ಮತ್ತು ಅಭಿವೃದ್ಧಿ ಆಧಾರದ ಮೇಲೆ
ವಿಶೇಷವಾಗಿ ನನ್ನ ವೈಯಕ್ತಿಕ ಚಾರಿತ್ರ್ಯವನ್ನು ಹಾಗೂ ನನ್ನ ಕಳಂಕ ರಹಿತ ವ್ಯಕ್ತಿತ್ವವನ್ನು ಪರಿಗಣಿಸಿ ಈ ಬಾರಿಯ ೨೦೨೩ ರ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಬಿಜೆಪಿ ಪಕ್ಷದ ಎಮ್.ಎಲ್.ಎ ಟಿಕೆಟ್ ತನಗೆ ನೀಡಬೇಕು ಎಂದು ಹಿಂದೂ ಸಂಘಟನೆ ಕಾರ್ಯಕರ್ತ ಶಂಕರ ನಾಯ್ಕ ಚೌತನಿ ಬಿಜೆಪಿ ಹೈಕಮಾಂಡ್ ಗೆ ಪತ್ರ ಬರೆದು ಮನವಿ ಮಾಡಿದ್ದರು.