ಖಾಸಗಿ ವಿಡಿಯೋ ವೈರಲ್ ಗೆ ಹೆದರಿ ಪಿ.ಯು.ಸಿ ವಿದ್ಯಾರ್ಥಿ ಹರ್ಷಿತ್ ಆತ್ಮಹತ್ಯೆ
ಬೆಳ್ತಂಗಡಿ- ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಹರ್ಷಿತ್ ಎಂಬ ವಿದ್ಯಾರ್ಥಿ ವೈರಲ್ ವಿಡಿಯೋಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ.
ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಹರ್ಷಿತ್ ನಿಗೆ ಇನ್ಸ್ಟಾಗ್ರಾಂನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಪರಿಚಯವಾಗಿದ್ದನು. ಆ ಬಳಿಕ ಹರ್ಷಿತ್ ಆತನೊಂದಿಗೆ ಇನ್ಸ್ಟಾಗ್ರಾಂ ಮೂಲಕ ಚಾಟ್ ಮಾಡಿಕೊಂಡಿದ್ದನು.
ನಂತರ ಆ ವ್ಯಕ್ತಿ ವಿಡಿಯೋ ಕಾಲ್ ನಲ್ಲಿ ನಿನ್ನ ಖಾಸಗಿ ವಿಡಿಯೋ ನನ್ನ ಬಳಿಯಿದೆ. ಅದನ್ನು ವೈರಲ್ ಮಾಡಬಾರದು ಎಂದರೆ ನನಗೆ 11,000 ರೂ ಹಣ ನೀಡಬೇಕೆಂದು ಬೇಡಿಕೆಯಿಟ್ಟಿದ್ದನು. ಹಣ ಹೊಂದಿಸಲು ಸಾಧ್ಯವಾಗದ ಹರ್ಷಿತ್ ವಿಡಿಯೋ ವೈರಲ್ ಆದರೆ ನನ್ನ ಮಾನ ಹೋಗುತ್ತೆಂದು ಹೆದರಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನಂತರ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂಬ ಮಾಹಿತಿ ಲಭ್ಯ ವಾಗಿದೆ.