ಶಿರಸಿ -ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಇದೀಗ ಮತ್ತೆ ಕೇಳಿ ಬರುತ್ತಿದ್ದು ಇಂದೂ ಸಹ ಶಿರಸಿಯ ಗಣೇಶ ನಗರದಲ್ಲಿ ಇಂತಹುದೇ ಪ್ರಕರಣ ಒಂದು ವರದಿಯಾಗಿದೆ. ಕಾಲೇಜು ವಿದ್ಯಾರ್ಥಿನಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗೆ ಇಂಗ್ಲಿಷ್ ಮಾಧ್ಯಮ ಅರ್ಥವಾಗದೆ ಈಕೆ ಗೊಂದಲಕ್ಕೆ ಒಳಗಾಗಿದ್ದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ವರದಿಯಾಗಿದೆ.
ಕಾರ್ಕಳದ ಎಸ್ ಡಿ ಎಮ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಕಲಿಯುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡವಳಾಗಿದ್ದಾಳೆ. ಶಿರಸಿಯ ಗಣೇಶ್ ನಗರದಲ್ಲಿ ನಿನ್ನೆ ಸಂಜೆ ಘಟನೆ ಸಂಭವಿಸಿದೆ.
ಅನುಷಾ 18 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡವಳೆಂದು ತಿಳಿದು ಬಂದಿದೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇನ್ಸ್ಪೆಕ್ಟರ್ ಸೀತಾರಾಮ್ ತನಿಖೆ ಕೈಗೊಂಡಿದ್ದಾರೆ. ಪೊಲೀಸ್ ತನಿಖೆ ನಂತರದಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದು ಬರಬೇಕಿದೆ.