ಭಟ್ಕಳದ ಜನಸ್ನೇಹಿ ಪೊಲೀಸ್ ಇನ್ಸ್ಪೆಕ್ಟರ್ ದಿವಾಕರ್ ಪಿ.ಎಂ ಅವರಿಗೆ ಭಟ್ಕಳದ ನಾಗರಿಕರಿಂದ ಪ್ರೀತಿಯ ಬೀಳ್ಕೊಡುಗೆ
ಭಟ್ಕಳ -ಮಂಗಳವಾರ ಸಂಜೆ ಭಟ್ಕಳದ ಅರ್ಬನ್ ಬ್ಯಾಂಕ್ ನ ಹಫಿಜ್ಕಾ ಹಾಲ್‌ನಲ್ಲಿ ಭಟ್ಕಳದಿಂದ ಬ್ರಹ್ಮಾವರದ ಠಾಣೆಗೆ ವರ್ಗಾವಣೆ ಗೊಂಡಿರುವ ಪೊಲಿಸ್ ನೀರಿಕ್ಷಕರಾಗಿದ್ದ ದಿವಾಕರ್ ಪಿ ಎಮ್ ರಿಗೆ ಭಟ್ಕಳದ ನಾಗರಿಕ ಹಾಗೂ ಪೋಲಿಸ್ ಇಲಾಖೆಯ ವತಿಯಿಂದ ಸನ್ಮಾನಿಸಿ ಬಿಳ್ಕೊಡಲಾಯಿತು.
ಈ ಸಂಧರ್ಬದಲ್ಲಿ ಪಿ ಆಯ್ ದಿವಾಕರರಿಗೆ ಭಟ್ಕಳದ ರಾಜಾಂಗಣದ ನಾಗಬನದ ಪಧಾಧಿಕಾರಿಗಳು ಸೇರಿದಂತೆ ಹಲವು ಸಂಘ ಸಂಸ್ಥೆಗಳ ಪಧಾಧಿಕಾರಿಗಳು ಮೈಸೂರು ಪೇಟಾ, ಹಾರ ಸೇರಿದಂತೆ ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿ ಆಯ್. ದಿವಾಕರ ತಾನೂ ಈ ಭಟ್ಕಳದಿಂದ ವೃತ್ತಿ ಜೀವನ ಆರಂಭಿಸಿ ರಾಜ್ಯದ ಜಿಲ್ಲೆಯ ಹಲವು ಭಾಗಗಳಲ್ಲಿ ಕೆಲಸ ನಿರ್ವಹಿಸಿದ್ದೆನೆ. ಆದರೆ ಭಟ್ಕಳ ಜನತೆಯ ಪ್ರೀತಿ ಮತ್ತು ಆದರತೆಗೆ ಸದಾ ಚಿರರುಣಿ ಭಟ್ಕಳ ಹೊರ ಜಗತ್ತಿಗೆ ಭಯಾನಕವಾಗಿ ಕಂಡರು ಇದು ಸುಂದರವದಂತಹ ಪ್ರದೇಶ ಇಲ್ಲಿ ಕಾರ್ಯ ನಿರ್ವಹಿಸಲು ಬರುವ ಅಧಿಕಾರಿಗಳಿಗೆ ಸೇವೆಗೆ ಆಗಮಿಸುವ ಸಂದರ್ಭ ಭಯವೆನಿಸಿದರು ಬಂದ ನಂತರ ಹೊಗಲು ಇಚ್ಚಿಸುವವರು ಅತೀ ಕಡಿಮೆ ಅಂತಹ ಸುಂದರ ಸಾಮರಸ್ಯದ ಪ್ರದೇಶ ಎಂದರು. ಕಳೆದ 2 ವರ್ಷಗಳಿಂದಿಚೆಗೆ ಯಾವೂದೇ ರಿತಿಯ ಕೋಮು ಸೌಹಾರ್ದ ಕೆಡದ ರೀತಿಯಲ್ಲಿ ಕೆಲಸ ಮಾಡಲು ಆಯಾ ಸಮುದಾಯದ ನಾಯಕರು ಸಹಕರಿಸಿದ್ದನ್ನು ಸ್ಮರಿಸಿದರು. ಪೋಲಿಸ್ ಅಧಿಕಾರ ಅವಧಿಯಯ ಸಂಧರ್ಭದ ತುಂಬ ದುಖದಾಯಕವಾ 2 ಘಟನೆಗಳನ್ನು ನೆನೆಸಿದ ಅವರು ಕಾರವಾರದಲ್ಲಿ 2002 ರ ಸುನಾಮಿ ಮತ್ತು 2022ರ ಭಟ್ಕಳದ ಪ್ರವಾಹ ಸಂಧರ್ಭ ಎನು ಸಹಾಯ ಮಾಡಲು ಆಗದ ಪರಿಸ್ಥಿಯು ಬೇಸರ ತಂದಿದ್ದರು ಪ್ರವಾಹದ ಕಾರ್ಯಾಚರಣೆಯ ನಂತರ ಜನರು ಬಂದು ಧನ್ಯವಾದ ಯಾ ಹಸ್ತಲಾಘವವನ್ನು ನೀಡಿ ಧನ್ಯವಾದಗಳನ್ನು ನೀಡಿದಾಗ ನಾವು ಮಾಡಿದ ಕರ್ತವ್ಯದ ಬಗ್ಗೆ ಹೆಮ್ಮೆಯೆನೆಸುತ್ತದೆ ಎಂದರು
ಈ ಸಂಧರ್ಬದಲ್ಲಿ ಸಾರ್ವಜನಿಕವಾಗಿ ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ,ಮಾತನಾಡಿ ಪಿ ಆಯ್ ದಿವಾಕರವರ ಅವರ ಕರ್ತವ್ಯ ಪ್ರಜ್ಞೆ ಮತ್ತು ಸಮಯೋಚಿತವಾಗಿ ವರ್ತಿಸಿ ದೊಡ್ಡ ವಿವಾದ ಎರ್ಪಡುವಂತಹ ಸಮಸ್ಯೆ ಗಳನ್ನು ನಿಭಾವಹಿಸುತ್ತಿದ್ದ ಅವರ ಕಾರ್ಯಗಳ ಕುರಿತು ಘ್ಲಾಶನೆ ವ್ಯಕ್ತ ಪಡಿಸಿದರು.
ಸಹೊದ್ಯೋಗಿಗಳು ಸೇರಿದಂತೆ ನಾಗರಿಕರು ಅವರ ಜೊತೆ ಒಡನಾಟ ಮತ್ತು ಅವರ ಸಮಯ ಪ್ರಜ್ಣೆ ಹಾಗೂ ಸಾಮಾಜಿಕವಾದ ಅವರ ಕಳಕಳಿಯ ಕುರಿತು ಹರ್ಷ ವ್ಯಕ್ತಪಡಿಸಿದರು. ಮತ್ತು ಮುಂದಿನ ದಿನಗಳಲ್ಲಿ ಬಡ್ತಿ ಪಡೆದು ಪೋಲಿಸ್ ಉಪವಿಭಾಗಾಧಿಕಾರಿ ಗಳಾಗಿ ಪದೊನ್ನತಿ ಹೊಂದಿ ಭಟ್ಕಳಕ್ಕೆ ಪುನಃ ಸೇವೆ ಸಲ್ಲಿಸಲು ಆಗಮಿಸುವಂತಾಗಿಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಪಿ.ಎಸ್. ಆಯ್ ಸುಮಾ ಬಿ. ವೈದ್ಯಾಧಿಕಾರಿ ಸವಿತಾ ಕಾಮತ್, ಗ್ರಾಮೀಣ ವೃತ್ತ ನೀರಿಕ್ಷಕ ಮಹಾಬಲೇಶ್ವರ ನಾಯ್ಕ , ಡಿ ವೈ ಎಸ್ ಪಿ ಶ್ರೀಕಾಂತ ಉಪಸ್ಥಿತರಿದ್ದರು ಈ ಕಾರ್ಯಕ್ರಮಕ್ಕೆ ದಿವಾಕರ ಅವರ ಅಭಿಮಾನಿಗಳು ಸೇರಿದಂತೆ ಸ್ಥಳಿಯ ನಾಗರಿಕರು ಉಪಸ್ಥಿತರಿದ್ದರು.