ವಿವಾಹಿತ ಮಹಿಳೆ ಜೊತೆ ಬಿಜೆಪಿ ಮುಖಂಡನ ಅನೈತಿಕ ಸಂಬಂಧ-ಮಹಿಳೆಯ ಪತಿಯಿಂದ ಪೊಲೀಸ ದೂರು
ವಿಟ್ಲ-ವಿಟ್ಲದ ಬಿಜೆಪಿ ಮುಖಂಡನೋರ್ವ ವಿವಾಹಿತ ಮಹಿಳೆಯನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದ ವೇಳೆ ಮಹಿಳೆಯ ಪತಿಯ ಕೈಗೆ ಸಿಕ್ಕಿಬಿದ್ದು ಓಡಿ ಹೋದ ಘಟನೆ ಸುಳ್ಯ ತಾಲೂಕಿನ ಜಾಲ್ಸೂರಿನಲ್ಲಿ ನಡೆದಿದೆ.
ವಿಟ್ಲ ಕೇಪು ನಿವಾಸಿ, ಪುಣಚ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಹರಿಪ್ರಸಾದ್ ಯಾದವ್ ಆರೋಪಿಯಾಗಿದ್ದು, ಅವರ ವಿರುದ್ಧ ಮಹಿಳೆಯ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪತ್ನಿ ಜಾತ್ರೆಗೆಂದು ತೆರಳಿದ್ದವಳನ್ನು ಹರಿಪ್ರಸಾದ್ ಯಾದವ್ ಅನೈತಿಕ ಸಂಬಂಧದ ದುರುದ್ದೇಶದಿಂದ ಕಾರಿನಲ್ಲಿ ಕರೆದುಕೊಂಡು ಹೋಗಿದ್ದು, ಕಾರನ್ನು ಹಿಂಬಾಲಿಸಿ ಸುಳ್ಯ ಬಳಿ ತಡೆಯಲು ಯತ್ನಿಸಿದಾಗ ಕಾರು ನಿಲ್ಲಿಸಿದೆ ತನ್ನ ಮೇಲೆ ಹಾಯಿಸಿ ಕೊಲೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ಸ್ಥಳಕ್ಕಾಗಮಿಸಿದ ಸ್ಥಳೀಯರನ್ನು ಕಂಡು ಆರೋಪಿ ಹರಿಪ್ರಸಾದ್ ಸ್ಥಳದಿಂದ ಓಡಿ ಹೋಗಿದ್ದಾನೆ ಎಂದು ದೂರಲಾಗಿದೆ.